ನವದೆಹಲಿ: ಸೆಪ್ಟೆಂಬರ್ 12 ಮತ್ತು 13 ರಂದು ಬ್ರಿಕ್ಸ್ (BRICS) ಶೃಂಗಸಭೆಯನ್ನು ಆಯೋಜಿಸಲು ದೆಹಲಿ ಸಜ್ಜಾಗಿದೆ. ಗುರುವಾರ ಸಂಜೆಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ಹಲವಾರು ವಿಶ್ವ ನಾಯಕರು ಮತ್ತು ಹಿರಿಯ ನಿಯೋಗಗಳು ರಾಷ್ಟ್ರ ರಾಜಧಾನಿಗೆ ಆಗಮಿಸಲಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಯಾರೆಲ್ಲಾ ಭಾಗವಹಿಸುತ್ತಿದ್ದಾರೆ?
ಪುಟಿನ್ ಹೊರತಾಗಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ, ಅಬುಧಾಬಿಯ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹ್ಮದ್ ಅಲಿ ಮತ್ತು ವಿಯೆಟ್ನಾಂನ ಪ್ರಧಾನಿ ಲೆ ಮಿನ್ ಹಂಗ್ ಅವರು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಪ್ರಮುಖ ನಾಯಕರಾಗಿದ್ದಾರೆ.
ರಷ್ಯಾ, ಚೀನಾ, ಇರಾನ್ ಮತ್ತು ಯುಎಇಯ ಈ ಪ್ರಮುಖ ಗಣ್ಯರು ರಾಷ್ಟ್ರ ರಾಜಧಾನಿಯ ವಿವಿಧ ಹೋಟೆಲ್‌ಗಳಲ್ಲಿ ತಂಗುವ ನಿರೀಕ್ಷೆಯಿದೆ; ಅವರ ಆಗಮನಕ್ಕೂ ಮುನ್ನವೇ ಭದ್ರತಾ ವ್ಯವಸ್ಥೆಗಳನ್ನು ವ್ಯಾಪಕವಾಗಿ ಬಲಪಡಿಸಲಾಗಿದೆ.
ಅತಿಥಿಗಳಿಗಾಗಿ ಹೋಟೆಲ್ ಗಳಿಂದ ಭರ್ಜರಿ ಸಿದ್ಧತೆ
ಈ ಮಧ್ಯೆ, ಆಗಮಿಸುವ ಗಣ್ಯರಿಗೆ ಸುಗಮ ಆತಿಥ್ಯವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಹೋಟೆಲ್‌ಗಳು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಇದರಲ್ಲಿ ಆಹಾರ, ಹೌಸ್‌ಕೀಪಿಂಗ್, ಅತಿಥಿ ಸೇವೆಗಳು ಮತ್ತು ಹೋಟೆಲ್ ಆವರಣದೊಳಗೆ ಸಂಚರಿಸಲು ವಿಶೇಷ ವ್ಯವಸ್ಥೆಗಳು ಸೇರಿವೆ.
ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ಇಂಧನ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಮತ್ತು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ರಾತ್ರಿ ಭಾರತಕ್ಕೆ ಮೂರು ದಿನಗಳ ಭೇಟಿಯನ್ನು ಆರಂಭಿಸಿದರು. ಇತರ ನಿಯೋಗಿಗಳು ಶುಕ್ರವಾರ ಆಗಮಿಸುವ ನಿರೀಕ್ಷೆಯಿದೆ.
BRICS ಶೃಂಗಸಭೆ 2026 ರಲ್ಲಿ ಭಾಗವಹಿಸುವ ವಿದೇಶಿ ಪ್ರತಿನಿಧಿಗಳ ಪಟ್ಟಿ
ಬ್ರೆಜಿಲ್ ವಿದೇಶಾಂಗ ಸಚಿವ ಮೌರೋ ವಿಯೆರಾ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
WHO (ವಿಶ್ವ ಆರೋಗ್ಯ ಸಂಸ್ಥೆ) ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್
AIIB (ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್) ಅಧ್ಯಕ್ಷ ಝು ಜಿಯಾಯಿ
ಉರುಗ್ವೆ ವಿದೇಶಾಂಗ ಸಚಿವ ಮಾರಿಯೋ ಲುಬೆಟ್ಕಿನ್
ದಕ್ಷಿಣ ಆಫ್ರಿಕಾ ಅಧ್ಯಕ್ಷ ಮಟಮೆಲಾ ಸಿರಿಲ್ ರಾಮಫೋಸಾ
ಉಗಾಂಡಾ ಉಪಾಧ್ಯಕ್ಷೆ ಜೆಸ್ಸಿಕಾ ಅಲುಪೋ
ಯುನೈಟೆಡ್ ನೇಷನ್ಸ್(ವಿಶ್ವಸಂಸ್ಥೆ) ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್
NDB(ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್) ಅಧ್ಯಕ್ಷೆ ದಿಲ್ಮಾ ರೂಸೆಫ್
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್
ನೈಜೀರಿಯಾ ಉಪಾಧ್ಯಕ್ಷ ಸೆನೆಟರ್ ಕಾಶಿಮ್ ಶೆಟ್ಟಿಮಾ
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ
ಯುಎಇ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅಬುಧಾಬಿಯ ಯುವರಾಜ
ಮಲೇಷ್ಯಾ ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ
ಇಥಿಯೋಪಿಯಾ ಪ್ರಧಾನ ಮಂತ್ರಿ ಅಬಿಯ್ ಅಹ್ಮದ್ ಅಲಿ
ಬುರುಂಡಿ ಅಧ್ಯಕ್ಷ ಎವರಿಸ್ಟ್ ನ್ದಾಯ್ಶಿಮಿಯೆ
ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ
ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್
ಕ್ಯೂಬಾ ವಿದೇಶಾಂಗ ಸಚಿವ ಬ್ರೂನೋ ರೋಡ್ರಿಗಸ್ ಪಾರಿಲ್ಲಾ
ಡಬ್ಲ್ಯೂಟಿಒ(ವಿಶ್ವ ವ್ಯಾಪಾರ ಸಂಸ್ಥೆ) ಮಹಾನಿರ್ದೇಶಕಿ ಡಾ. ಎನ್ಗೋಜಿ ಒಕೊಂಜೊ-ಇವೆಲಾ
ಬೆಲಾರಸ್ ವಿದೇಶಾಂಗ ಸಚಿವ ಮ್ಯಾಕ್ಸಿಮ್ ರೈಝೆಂಕೋವ್
ವಿಯೆಟ್ನಾಂ ಪ್ರಧಾನ ಮಂತ್ರಿ ಲೆ ಮಿನ್ಹ್ ಹಂಗ್
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಬಹ್ರೇನ್ ವಿದೇಶಾಂಗ ಸಚಿವ ಡಾ. ಅಬ್ದುಲ್ ಲತೀಫ್ ಬಿನ್ ರಶೀದ್ ಅಲ್ ಝಯಾನಿ
ಕಝಾಕಿಸ್ತಾನ್ ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೊಕಾಯೆವ್
ಸೌದಿ ಅರೇಬಿಯಾ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್
ಆಹಾರ ಮತ್ತು ಇಂಧನ ಕ್ಷೇತ್ರದಲ್ಲಿ ಸಾಮೂಹಿಕ ಸಹಕಾರ ಬಲಪಡಿಸುವತ್ತ ಬ್ರಿಕ್ಸ್(BRICS) ಶೃಂಗಸಭೆಯ ಗಮನ
ಶನಿವಾರದಿಂದ ಆರಂಭವಾಗಲಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯು ಆಹಾರ, ಇಂಧನ, ಆರೋಗ್ಯ, ವಿಪತ್ತು ತಗ್ಗಿಸುವಿಕೆ ಮತ್ತು ಪ್ರಮುಖ ಪೂರೈಕೆ ಸರಪಳಿಗಳ(critical supply chains) ವಿಷಯದಲ್ಲಿ ಸಾಮೂಹಿಕ ಸಹಕಾರ ಹೆಚ್ಚಿಸುವತ್ತ ಗಮನಹರಿಸುವ ನಿರೀಕ್ಷೆಯಿದೆ. ಈ ಮೂಲಕ, ಛಿದ್ರಗೊಂಡಿರುವ ಭೌಗೋಳಿಕ-ರಾಜಕೀಯ ಪರಿಸ್ಥಿತಿಯನ್ನು ನಿಭಾಯಿಸಲು ಈ ಒಕ್ಕೂಟವನ್ನು ಒಂದು ಪರಿಣಾಮಕಾರಿ ಆಧಾರಸ್ತಂಭವಾಗಿ ಬಿಂಬಿಸಲು ನವದೆಹಲಿ ಮುಂದಾಗಿದೆ.
ರಷ್ಯಾ-ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದ ಬಿಕ್ಕಟ್ಟು(ವಿಶೇಷವಾಗಿ ಹಾರ್ಮುಜ್ ಜಲಸಂಧಿಯ ದಿಗ್ಬಂಧನ) ಮತ್ತು ಟ್ರಂಪ್ ಆಡಳಿತದ ವ್ಯಾಪಾರ ಹಾಗೂ ಸುಂಕ ನೀತಿಗಳಂತಹ ಪ್ರತಿಕೂಲ ಪರಿಣಾಮಗಳನ್ನು ಜಾಗತಿಕ ಆರ್ಥಿಕತೆಯು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಈ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿರುವುದು ಗಮನಾರ್ಹವಾಗಿದೆ.
ಶುಕ್ರವಾರ ಮಧ್ಯಾಹ್ನ ಪುಟಿನ್ ಮತ್ತು ಪ್ರಧಾನಿ ಮೋದಿ ಅವರು ವ್ಯಾಪಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಕ್ಷಣೆ, ಇಂಧನ, ತಂತ್ರಜ್ಞಾನ, ಔಷಧೀಯ ವಲಯ ಮತ್ತು ಜನರ ನಡುವಿನ ವಿನಿಮಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ವಿಷಯದ ಮೇಲೆ ಈ ಸಭೆಯು ಗಮನಹರಿಸುವ ನಿರೀಕ್ಷೆಯಿದೆ.

