HomeIndiaಬ್ರಿಕ್ ಶೃಂಗಸಭೆ: ರಷ್ಯಾ ಅಧ್ಯಕ್ಷ ಪುಟಿನ್- ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ಆರಂಭ: ತಿರುಕ್ಕುರಳ್ ಪುಸ್ತಕ...

ಬ್ರಿಕ್ ಶೃಂಗಸಭೆ: ರಷ್ಯಾ ಅಧ್ಯಕ್ಷ ಪುಟಿನ್- ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ಆರಂಭ: ತಿರುಕ್ಕುರಳ್ ಪುಸ್ತಕ ಗಿಫ್ಟ್ ಕೊಟ್ಟ ಮೋದಿ

ನವದೆಹಲಿ: 18ನೇ ಬ್ರಿಕ್ ಶೃಂಗ ಸಭೆ ಹಿನ್ನೆಲೆಯಲ್ಲಿ ದೆಹಲಿಯ ಭಾರತ್ ಮಂಟಪದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷಿಯ ಮಾತುಕತೆ ಆರಂಭವಾಗಿದೆ.

18ನೇ ಬ್ರಿಕ್ಸ್ ಶೃಂಗಸಭೆಗೆ ವಿಶ್ವದ ಹಲವು ಪ್ರಮುಖ ದೇಶಗಳ ಗಣ್ಯರು ಹಾಗೂ ನಾಯಕರು ಆಗಮಿಸುತ್ತಿದ್ದಾರೆ. ಸೆ.12 ಹಾಗೂ 13ರಂದು ಬ್ರಿಕ್ ಶೃಂಗಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ 12 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಭಾರತ್ ಮಂಟಪ್ ನ ಪ್ರವೇಶ ದ್ವಾರಗಳು ಸೇರಿದಂತೆ ಇಡೀ ಆವರಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭಾರತ್ ಮಂಟಪದ 8ಕ್ಕೂ ಹೆಚ್ಚು ಪ್ರವೇಶ ಗೇಟ್‌ಗಳನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿದ್ದು, ಪ್ರತಿ ಗೇಟ್‌ನಲ್ಲೂ ಹೆಚ್ಚುವರಿ ತಪಾಸಣೆ ಮತ್ತು ಬಿಗಿ ಭದ್ರತೆಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ಭಾರತ್ ಮಂಟಪ್ ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ಆರಂಭವಾಗಿದೆ. ಪುಟಿನ್ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಮಿಳು ಸಂತ ತಿರುವಳ್ಳುವರ್ ಅವರ ತಿರುಕ್ಕುರಳ್ ಪುಸ್ತಕವನ್ನು ನೀಡಿದರು. ರಶ್ಃಯಾ ಭಾಷೆಗೆ ಅನುವಾದಿಸಲ್ಪಟ್ಟಿರುವ ಪುಸ್ತಕವನ್ನು ನೀಡಿದ್ದು, ಇದನ್ನು ತಮಗಾಗಿ ರಷ್ಯನ್ ಭಾಷೆಗೆ ಅನುವಾದಿಸಿದ್ದಾಗಿ ತಿಳಿಸಿದ್ದಾರೆ.

ಇದು ಜನರಿಂದ ಜನರ ಸಂಪರ್ಕ, ಮಾನವ ಜೀವನದ ಕುರಿತು ಇರುವ ಪುಸ್ತಕವಾಗಿದ್ದು, ಇದು ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಪುಸ್ತಕ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ದ್ವಿಪಕ್ಷೀಯ ಮಾತುಕತೆ ವೇಳೆ ವ್ಯಾಪಾರ ಒಪ್ಪಂದದ ಕುರಿತು ಉಭಯ ದೇಶಗಳ ನಾಯಕರು ಚರ್ಚಿಸಲಿದ್ದಾರೆ. ಪ್ರಮುಖವಾಗಿ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದಗಳು ನಡೆಯುವ ಸಾಧ್ಯತೆ ಇದೆ. ಬ್ರಹ್ಮೋಸ್, ಸುಖೋಯ್, s-400 ಕುರಿತು ಹಾಗೂ ಭ್ರಹ್ಮೋಸ್ ಮುಂದಿನ ಆವೃತ್ತಿ ಅಭಿವೃದ್ಧಿ ಕುರಿತು ಮಾತುಕತೆ ನಡೆಯಲಿದೆ. ಇನ್ನು ಇಂಧನ, ಪರಮಾಣು ಸಹಕಾರಗಳ ಕುರಿತಾಗಿಯೂ ಚರ್ಚೆ ನಡೆಯಲಿದೆ.

2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ 100 ಬಿಲಿಯನ್ ಡಾಲರ್ ಗುರಿ ಹೊಂದಲಾಗಿದೆ. ಪ್ರಸ್ತುತ ದ್ವಿಪಕ್ಷೀಯ ವ್ಯಾಪಾರ ಸುಮಾರು 60 ಬಿಲಿಯನ್ ನಷ್ಟಿದ್ದು, ಪುಟಿನ್ ಭೇಟಿ ಭಾರತ-ರಷ್ಯಾ ಸಂಬಂಧಕ್ಕೆ ಹೊಸ ಆಯಾಮ ನೀಡಲಿದೆ.

ಬ್ರಿಕ್ಸ್ ಒಕ್ಕೂಟವು ಸ್ಥಾಪನೆಯಾಗಿ 20 ವರ್ಷಗಳನ್ನು ಪೂರೈಸಿದ್ದು, ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯಲ್ಲಿ 18ನೇ ಶೃಂಗಸಭೆ ನಡೆಯಲಿದೆ. ಭಾರತವು ನಾಲ್ಕನೇ ಬಾರಿಗೆ ಈ ಶೃಂಗಸಭೆಯ ಆತಿಥ್ಯ ವಹಿಸುತ್ತಿದೆ. 2006ರಲ್ಲಿ ಕೇವಲ 4 ದೇಶಗಳೊಂದಿಗೆ ಆರಂಭವಾದಾಗ ಬ್ರಿಕ್ಸ್ ಪಾಲು ವಿಶ್ವ ಆರ್ಥಿಕತೆಯಲ್ಲಿ ಶೇ.20.4 ಇತ್ತು. ಆದರೆ ಐಎಂಎಫ್ (IMF) ವರದಿ ಪ್ರಕಾರ, ಇಂದು ಬ್ರಿಕ್ಸ್ ಜಾಗತಿಕ ಜಿಡಿಪಿಯಲ್ಲಿ ಶೇ.41 ರಷ್ಟು ಪಾಲನ್ನು ಹೊಂದಿದ್ದು, ಜಿ7 (ಶೇ.28) ರಾಷ್ಟ್ರಗಳಿಗಿಂತ ಬಹಳ ಮುಂದಿದೆ.

ಈ ಬಾರಿಯ ಶೃಂಗಸಭೆಯ ಧ್ಯೇಯವಾಕ್ಯ “ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” ಎಂಬುದಾಗಿದೆ. ಪಾಶ್ಚಿಮಾತ್ಯ ದೇಶಗಳ ಪ್ರಭಾವವನ್ನು ಮೀರಿ ‘ಗ್ಲೋಬಲ್ ಸೌತ್’ ಅಂದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಧ್ವನಿಯಾಗಲು ಭಾರತಕ್ಕೆ ಇದು ಬಹುದೊಡ್ಡ ವೇದಿಕೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular