HomeLatest NewsBREAKING: ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಗಲಾಟೆ: ಮನೆಗೆ ನುಗ್ಗಿ ಹಲ್ಲೆ, ಮಾಳಿಗೆ ಧ್ವಂಸ

BREAKING: ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಗಲಾಟೆ: ಮನೆಗೆ ನುಗ್ಗಿ ಹಲ್ಲೆ, ಮಾಳಿಗೆ ಧ್ವಂಸ

ಬೆಳಗಾವಿ: ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ದಲಿತ ಸಮುದಾಯದ ಸದಾಶಿವ ಭಜಂತ್ರಿ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ.

ಬೈಲಹೊಂಗಲ ತಾಲೂಕಿನ ದೇಶನೂರಿನಲ್ಲಿ ಘಟನೆ ನಡೆದಿದೆ. ಸದಾಶಿವ ಭಜಂತ್ರಿ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಕಲ್ಲೆಸೆದು ಶೌಚಾಲಯ, ಮನೆಯ ಮಾಳಿಗೆ ಧ್ವಂಸಗೊಳಿಸಿದ್ದಾರೆ. ವಾಲ್ಮೀಕಿ ಭವನ ನಿರ್ಮಾಣದ ಜಾಗ ಸರ್ವೆಗೆ ಎಸ್.ಟಿ. ಸಮುದಾಯದ ಯುವಕರು ಬಂದಿದ್ದರು. ವಾಲ್ಮೀಕಿ ಸಮುದಾಯ ಭವನಕ್ಕೆ ಸದಾಶಿವ ಭಜಂತ್ರಿ ಕುಟುಂಬ ವಿರೋಧ ವ್ಯಕ್ತಪಡಿಸಿದ್ದು, ಸಮುದಾಯ ಭವನ ನಿರ್ಮಾಣ ವಿರೋಧಿಸಿದ್ದಕ್ಕೆ ಸದಾಶಿವ ಕುಟುಂಬದವರ ಮೇಲೆ ಹಲ್ಲೆ ಮಾಡಲಾಗಿದೆ.

ಕಲ್ಲು ಕಟ್ಟಿಗೆಯಿಂದ ಹೊಡೆದು ಬಾಗಿಲು ಮುರಿದು ಒಳ ನುಗ್ಗಿದ್ದು, ಮಹಿಳೆ ಎನ್ನುವುದನ್ನು ಲೆಕ್ಕಿಸದೇ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋ ಪರಿಶೀಲಿಸಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಸದ್ಯ ದೇಶನೂರು ಗ್ರಾಮ ಬೂದಿ ಮುಚ್ಚಿದ ಕೆಂಡದಂತಿದೆ. ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular