HomeKarnatakaBREAKING: ಪದೇ ಪದೇ ಮಾದಕ ವಸ್ತು ಮಾರಾಟದಲ್ಲಿ ಭಾಗಿ ಹಿನ್ನೆಲೆ ಬೀದರ್ ಜಿಲ್ಲೆಯಿಂದ ಇಬ್ಬರು ರೌಡಿಗಳ...

BREAKING: ಪದೇ ಪದೇ ಮಾದಕ ವಸ್ತು ಮಾರಾಟದಲ್ಲಿ ಭಾಗಿ ಹಿನ್ನೆಲೆ ಬೀದರ್ ಜಿಲ್ಲೆಯಿಂದ ಇಬ್ಬರು ರೌಡಿಗಳ ಗಡಿಪಾರು: ಜಿಲ್ಲಾಧಿಕಾರಿ ಆದೇಶ

ಬೀದರ್: ಬೀದರ್ ಜಿಲ್ಲೆಯಿಂದ ಇಬ್ಬರು ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಎಸ್‌ಪಿ ಪ್ರದೀಪ್ ಗುಂಟೆ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ.

ರೌಡಿಶೀಟರ್ ಸುದೇಶ್ ಕಸಬೆ ಎಂಬುವನನ್ನು ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ, ಬೀದರ್ ನ ದೀನದಯಾಳ್ ನಗರದ ಮಾಂಗರವಾಡಿಗಲ್ಲಿ ವಾಸಿಯಾಗಿರುವ ಸುದೇಶ್ ನನ್ನು ಗಡಿಪಾರು ಮಾಡಲಾಗಿದೆ.

ರೌಡಿಶೀಟರ್ ವಿಕಾಸ್ ನನ್ನು ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ವಿಕಾಸ್ ಕಸಬೆ ಸುದೇಶ್ ನನ್ನು ಗಡಿಪಾರು ಮಾಡಿ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ. ಎಸ್‌ಪಿ ಪ್ರದೀಪ್ ಗುಂಟೆ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾದಕ ವಸ್ತುಗಳ ಮಾರಾಟದಲ್ಲಿ ಇವರಿಬ್ಬರೂ ಪದೇ ಪದೇ ಭಾಗಿಯಾಗುತ್ತಿದ್ದರು. ಇಬ್ಬರ ವಿರುದ್ಧವೂ 3 ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಬೀದರ್ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular