HomeLatest NewsBREAKING : 2026 ನೇ ಸಾಲಿನ ಪ್ರತಿಷ್ಟಿತ ‘ಗ್ರ್ಯಾಮಿ ಪ್ರಶಸ್ತಿ’ ಪ್ರಕಟ : ಇಲ್ಲಿದೆ ವಿಜೇತರ...

BREAKING : 2026 ನೇ ಸಾಲಿನ ಪ್ರತಿಷ್ಟಿತ ‘ಗ್ರ್ಯಾಮಿ ಪ್ರಶಸ್ತಿ’ ಪ್ರಕಟ : ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ |Grammy Award 2026

2026ರ  68ನೇ ಆವೃತ್ತಿಯ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ (Grammys 2026) ಪ್ರದಾನ ಸಮಾರಂಭವು ಫೆಬ್ರವರಿ 1ರಂದು ಲಾಸ್ ಏಂಜಲೀಸ್‌ನಲ್ಲಿ ಅದ್ದೂರಿಯಾಗಿ ಜರುಗಿತು.

ಹೌದು,   ಲಾಸ್ ಏಂಜಲೀಸ್‌ನ ಕ್ರಿಪ್ಟೋ.ಕಾಮ್ ಅರೆನಾದಲ್ಲಿ (Sunday, February 1) ನಡೆದ 2026ರ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರು ಒಂದೆಡೆ ಸೇರಿದ್ದರು. ಹಾಸ್ಯನಟ ಟ್ರೆವರ್ ನೋವಾ ಸತತ ಆರನೇ ಮತ್ತು ಕೊನೆಯ ಬಾರಿಗೆ ಈ ಕಾರ್ಯಕ್ರಮವನ್ನು ನಿರೂಪಿಸಿದರು. ಈ ವರ್ಷ ಕೆಂಡ್ರಿಕ್ ಲಾಮರ್ ಅತಿ ಹೆಚ್ಚು (9) ನಾಮಿನೇಷನ್‌ಗಳನ್ನು ಪಡೆದಿದ್ದರೆ, ಲೇಡಿ ಗಾಗಾ ಮತ್ತು ಪ್ರೊಡ್ಯೂಸರ್ಸ್ ಜಾಕ್ ಆಂಟೊನಾಫ್ 7 ನಾಮಿನೇಷನ್‌ಗಳೊಂದಿಗೆ ಪೈಪೋಟಿಯಲ್ಲಿದ್ದರು.

2026ರ 68ನೇ ಗ್ರ್ಯಾಮಿ ಪ್ರಶಸ್ತಿಗಳ (Grammys 2026) ಪೂರ್ಣ ವಿಜೇತರು ಮತ್ತು ನಾಮನಿರ್ದೇಶನಗೊಂಡವರ ಪಟ್ಟಿ ಇಲ್ಲಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಮುಖ ವಿಭಾಗಗಳು (General Field)

  • ರೆಕಾರ್ಡ್ ಆಫ್ ದಿ ಇಯರ್ (Record Of The Year):
    • ವಿಜೇತ: ಕೆಂಡ್ರಿಕ್ ಲಾಮರ್ ಮತ್ತು SZA — Luther
  • ಆಲ್ಬಮ್ ಆಫ್ ದಿ ಇಯರ್ (Album Of The Year):
    • ವಿಜೇತ: ಬ್ಯಾಡ್ ಬನ್ನಿ — DeBÍ TiRAR MáS FOToS
  • ಸಾಂಗ್ ಆಫ್ ದಿ ಇಯರ್ (Song Of The Year – ಸಾಹಿತ್ಯ):
    • ವಿಜೇತ: ಬಿಲ್ಲಿ ಎಲಿಶ್ ಮತ್ತು ಫಿನಿಯಾಸ್ ಓ ಕಾನಲ್ — WILDFLOWER
  • ಅತ್ಯುತ್ತಮ ಹೊಸ ಕಲಾವಿದೆ (Best New Artist):
    • ವಿಜೇತ: ಒಲಿವಿಯಾ ಡೀನ್ (Olivia Dean)

ಪಾಪ್ ಮತ್ತು ಡ್ಯಾನ್ಸ್ (Pop & Dance)

  • ಅತ್ಯುತ್ತಮ ಪಾಪ್ ಸೋಲೋ ಪರ್ಫಾರ್ಮೆನ್ಸ್: ಲೋಲಾ ಯಂಗ್ — Messy
  • ಅತ್ಯುತ್ತಮ ಪಾಪ್ ಡ್ಯುಯೊ/ಗ್ರೂಪ್ ಪರ್ಫಾರ್ಮೆನ್ಸ್: ಸಿಂಥಿಯಾ ಎರಿವೊ ಮತ್ತು ಅರಿಯಾನಾ ಗ್ರಾಂಡೆ — Defying Gravity
  • ಅತ್ಯುತ್ತಮ ಪಾಪ್ ವೋಕಲ್ ಆಲ್ಬಮ್: ಲೇಡಿ ಗಾಗಾ — MAYHEM
  • ಅತ್ಯುತ್ತಮ ಡ್ಯಾನ್ಸ್/ಎಲೆಕ್ಟ್ರಾನಿಕ್ ರೆಕಾರ್ಡಿಂಗ್: ಟೇಮ್ ಇಂಪಾಲ — End Of Summer
  • ಅತ್ಯುತ್ತಮ ಡ್ಯಾನ್ಸ್ ಪಾಪ್ ರೆಕಾರ್ಡಿಂಗ್: ಲೇಡಿ ಗಾಗಾ — Abracadabra
  • ಅತ್ಯುತ್ತಮ ಡ್ಯಾನ್ಸ್/ಎಲೆಕ್ಟ್ರಾನಿಕ್ ಆಲ್ಬಮ್: ಎಫ್‌ಕೆಎ ಟ್ವಿಗ್ಸ್ — EUSEXUA

ರಾಕ್ ಮತ್ತು ಆಲ್ಟರ್ನೇಟಿವ್ (Rock & Alternative)

  • ಅತ್ಯುತ್ತಮ ರಾಕ್ ಪರ್ಫಾರ್ಮೆನ್ಸ್: ಯಂಗ್‌ಬ್ಲಡ್ (YUNGBLUD) — Changes (Live)
  • ಅತ್ಯುತ್ತಮ ಮೆಟಲ್ ಪರ್ಫಾರ್ಮೆನ್ಸ್: ಟರ್ನ್‌ಸ್ಟೈಲ್ — BIRDS
  • ಅತ್ಯುತ್ತಮ ರಾಕ್ ಸಾಂಗ್: ನೈನ್ ಇಂಚ್ ನೈಲ್ಸ್ — As Alive As You Need Me To Be
  • ಅತ್ಯುತ್ತಮ ರಾಕ್ ಆಲ್ಬಮ್: ಟರ್ನ್‌ಸ್ಟೈಲ್ — NEVER ENOUGH
  • ಅತ್ಯುತ್ತಮ ಆಲ್ಟರ್ನೇಟಿವ್ ಮ್ಯೂಸಿಕ್ ಪರ್ಫಾರ್ಮೆನ್ಸ್: ದಿ ಕ್ಯೂರ್ — Alone
  • ಅತ್ಯುತ್ತಮ ಆಲ್ಟರ್ನೇಟಿವ್ ಮ್ಯೂಸಿಕ್ ಆಲ್ಬಮ್: ದಿ ಕ್ಯೂರ್ — Songs Of A Lost World

ರಾಪ್ ಮತ್ತು ಆರ್ ಅಂಡ್ ಬಿ (Rap & R&B)

  • ಅತ್ಯುತ್ತಮ ರಾಪ್ ಪರ್ಫಾರ್ಮೆನ್ಸ್: ಕ್ಲಿಪ್ಸ್, ಪುಶಾ ಟಿ ಮತ್ತು ಮಾಲಿಸ್ (ಫೀಚರಿಂಗ್ ಕೆಂಡ್ರಿಕ್ ಲಾಮರ್ ಮತ್ತು ಫಾರೆಲ್ ವಿಲಿಯಮ್ಸ್) — Chains & Whips
  • ಅತ್ಯುತ್ತಮ ರಾಪ್ ಸಾಂಗ್: ಕೆಂಡ್ರಿಕ್ ಲಾಮರ್ — tv off
  • ಅತ್ಯುತ್ತಮ ರಾಪ್ ಆಲ್ಬಮ್: ಕೆಂಡ್ರಿಕ್ ಲಾಮರ್ — GNX
  • ಅತ್ಯುತ್ತಮ ಆರ್ ಅಂಡ್ ಬಿ ಆಲ್ಬಮ್: ಲಿಯೋನ್ ಥಾಮಸ್ — MUTT
  • ಅತ್ಯುತ್ತಮ ಆರ್ ಅಂಡ್ ಬಿ ಸಾಂಗ್: ಕೆಹ್ಲಾನಿ — Folded

ಕಂಟ್ರಿ ಮತ್ತು ಅಮೆರಿಕಾನಾ (Country & Americana)

  • ಅತ್ಯುತ್ತಮ ಕಂಟ್ರಿ ಸೋಲೋ ಪರ್ಫಾರ್ಮೆನ್ಸ್: ಕ್ರಿಸ್ ಸ್ಟೇಪಲ್ಟನ್ — Bad As I Used To Be
  • ಅತ್ಯುತ್ತಮ ಕಂಟ್ರಿ ಡ್ಯುಯೊ ಪರ್ಫಾರ್ಮೆನ್ಸ್: ಶಾಬೂಜಿ ಮತ್ತು ಜೆಲ್ಲಿ ರೋಲ್ — Amen
  • ಅತ್ಯುತ್ತಮ ಕಂಟ್ರಿ ಸಾಂಗ್: ಟೈಲರ್ ಚೈಲ್ಡರ್ಸ್ — Bitin’ List
  • ಅತ್ಯುತ್ತಮ ಕಂಟ್ರಿ ಆಲ್ಬಮ್ (ಸಮಕಾಲೀನ): ಜೆಲ್ಲಿ ರೋಲ್ — Beautifully Broken
  • ಅತ್ಯುತ್ತಮ ಅಮೆರಿಕಾನಾ ಆಲ್ಬಮ್: ಜಾನ್ ಬಾಟಿಸ್ಟೆ — BIG MONEY

ಗ್ಲೋಬಲ್ ಮತ್ತು ಇತರ ವಿಭಾಗಗಳು (Global & Others)

  • ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್: ಬ್ಯಾಡ್ ಬನ್ನಿ — EoO
  • ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಮ್: ಕೇಟಾನೊ ವೆಲೋಸೊ ಮತ್ತು ಮಾರಿಯಾ ಬೆಥಾನಿಯಾ — Ao Vivo
  • ಅತ್ಯುತ್ತಮ ಆಫ್ರಿಕನ್ ಮ್ಯೂಸಿಕ್ ಪರ್ಫಾರ್ಮೆನ್ಸ್: ಟೈಲಾ — PUSH 2 START
  • ಅತ್ಯುತ್ತಮ ಆಡಿಯೋ ಬುಕ್: ದಲೈ ಲಾಮಾ — Meditations
  • ಅತ್ಯುತ್ತಮ ಕಾಮೆಡಿ ಆಲ್ಬಮ್: ನೇಟ್ ಬರ್ಗಾಟ್ಜೆ — Your Friend, Nate Bargatze
  • ಅತ್ಯುತ್ತಮ ಮ್ಯೂಸಿಕ್ ವಿಡಿಯೋ: ಡೋಚಿ — Anxiety
  • ಅತ್ಯುತ್ತಮ ಮ್ಯೂಸಿಕ್ ಫಿಲ್ಮ್: ಜಾನ್ ವಿಲಿಯಮ್ಸ್ — Music By John Williams

ತಾಂತ್ರಿಕ ವಿಭಾಗಗಳು (Technical & Classical)

  • ವರ್ಷದ ನಿರ್ಮಾಪಕ (Producer Of The Year): ಸರ್ಕುಟ್ (Cirkut)
  • ವರ್ಷದ ಗೀತಕಾರ (Songwriter Of The Year): ಆಮಿ ಅಲೆನ್ (Amy Allen)
  • ಅತ್ಯುತ್ತಮ ಆಲ್ಬಮ್ ಕವರ್: ಟೈಲರ್, ದಿ ಕ್ರಿಯೇಟರ್ — CHROMAKOPIA
  • ಅತ್ಯುತ್ತಮ ಐತಿಹಾಸಿಕ ಆಲ್ಬಮ್: ಜೋನಿ ಮಿಚೆಲ್ — Volume 4: The Asylum Years
  • ಅತ್ಯುತ್ತಮ ಶಾಸ್ತ್ರೀಯ ಆರ್ಕೆಸ್ಟ್ರಾ ಪರ್ಫಾರ್ಮೆನ್ಸ್: ಆಂಡ್ರಿಸ್ ನೆಲ್ಸನ್ಸ್ — Messiaen: Turangalîla-Symphonie

ಈ ಬಾರಿ ಕೆಂಡ್ರಿಕ್ ಲಾಮರ್ ಮತ್ತು ಲೇಡಿ ಗಾಗಾ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಸಂಗೀತ ಲೋಕದಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಅನಿಷ್ಕಾ ಶಂಕರ್ ಮತ್ತು ಶಕ್ತಿ ಬ್ಯಾಂಡ್ ನಾಮಿನೇಟ್ ಆಗಿದ್ದರೂ ಈ ಬಾರಿ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular