HomeKarnatakaBREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ಆನ್'ಲೈನ್ ಬೆಟ್ಟಿಂಗ್’ಗೆ ಒಂದೇ ಕುಟುಂಬದ...

BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ಆನ್’ಲೈನ್ ಬೆಟ್ಟಿಂಗ್’ಗೆ ಒಂದೇ ಕುಟುಂಬದ ಮೂವರು ಬಲಿ.!

ಮೈಸೂರು : ಆನ್ ಲೈನ್ ಬೆಟ್ಟಿಂಗ್ ಗೆ ಒಂದೇ ಕುಟುಂಬದ ಮೂವರು ಬಲಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಬಳಿ ಈ ಘಟನೆ ನಡೆದಿದೆ.  ನೇಣು ಬಿಗಿದುಕೊಂಡು ಅಣ್ಣ, ತ‍ಮ್ಮ ಹಾಗೂ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೋಶಿ ಆಂಥೋನಿ ತನ್ನ ತಮ್ಮ ಜೋಬಿ ಆಂಥೋನಿ ಮತ್ತು ನಾದಿನಿ ಶರ್ಮಿಳಾ ಆಲಿಯಾಸಿ ಸ್ವಾತಿ ಮೇಲೆ ಮೋಸದ ಆರೋಪ ಹೊರಿಸಿ ನಿನ್ನೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೋಶಿ ಆಂಥೋನಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದನು. “ಸಹೋದರ ಜೋಬಿ, ಆತನ ಪತ್ನಿ ಶರ್ಮಿಳಾ ಮೋಸದಿಂದ ನನ್ನ ಸಹೋದರಿ ಮೂಲಕ ಊರು ತುಂಬ ಸಾಲ ಪಡೆದು ಮೋಸ ಮಾಡಿದ್ದಾರೆ.. ನನ್ನ ಸಾವಿಗೆ ತಮ್ಮ ಜೋಬಿ ಆಂಥೋನಿ ಮತ್ತು ಆತನ ಪತ್ನಿ ಶರ್ಮಿಳಾ ಕಾರಣ. ಅವರಿಗೆ ಶಿಕ್ಷೆ ಕೊಡಿಸಿ” ಎಂದು ವಿಡಿಯೋದಲ್ಲಿ ಹೇಳಿ ನೇಣಿಗೆ ಶರಣಾಗಿದ್ದಾರೆ. ನಿನ್ನೆ ತಮ್ಮ ನಾದಿನಿ ಮೇಲೆ ಆರೋಪಿಸಿ ಜೋಶಿ ಆಂಥೋನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶರ್ಮಿಳ ವಿರುದ್ಧ ಆಂಥೋನಿ ಸಾಲದ ಆರೋಪ ಮಾಡಿದ್ದರು. ಐಪಿಎಲ್ ಆಟ ಆಡಿ ಸಾಲ ಮಾಡಿ ತಂಗಿಗೆ ಮೋಸ ಮಾಡಿದ್ದಾರೆ. ನನ್ನ ಸಾವಿಗೆ ತಮ್ಮ ಹಾಗೂ ಆತನ ಹೆಂಡತಿಯ ಕಾರಣ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂಥೋನಿ ಸಾವಿನ ವಿಚಾರ ತಿಳಿದು ಇಂದು ಶರ್ಮಿಳಾ ಹಾಗೂ ಆತನ ಪತಿ ನೇಣಿಗೆ ಶರಣಾಗಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular