HomeInternationalBREAKING : ಬ್ರೆಜಿಲ್ ನಲ್ಲಿ ಭೀಕರ 'ಅಗ್ನಿ ಅವಘಡ' : 9 ಮಂದಿ ಕಾರ್ಮಿಕರು ಸಜೀವ...

BREAKING : ಬ್ರೆಜಿಲ್ ನಲ್ಲಿ ಭೀಕರ ‘ಅಗ್ನಿ ಅವಘಡ’ : 9 ಮಂದಿ ಕಾರ್ಮಿಕರು ಸಜೀವ ದಹನ

ಬ್ರೆಜಿಲ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 9 ಮಂದಿ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ.

ಬ್ರೆಜಿಲ್ನ ಉತ್ತರ ಪ್ರದೇಶದ ಪ್ಯಾರಾ ರಾಜ್ಯದ ಪುರಸಭೆಯಾದ ಪರೌಪೆಬಾಸ್ ನಗರದ ಲ್ಯಾಂಡ್ ಅಂಡ್ ಲಿಬರ್ಟಿ ಕ್ಯಾಂಪ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ನೆಟ್ವರ್ಕ್ನಲ್ಲಿ ಕೆಲಸ ಮಾಡುತ್ತಿದ್ದ ಇಂಟರ್ನೆಟ್ ಕಂಪನಿಯ ತಂತ್ರಜ್ಞರು ಆಕಸ್ಮಿಕವಾಗಿ ಇಂಟರ್ನೆಟ್ ಕೇಬಲ್ ಅನ್ನು ಹೈ-ವೋಲ್ಟೇಜ್ ಕೇಬಲ್ಗೆ ಸಂಪರ್ಕಿಸಿದ್ದು, ಇದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕ್ಯಾಂಪ್ನ ಎರಡು ಬ್ಯಾರಕ್ಗಳು ತ್ವರಿತವಾಗಿ ಬೆಂಕಿ ಅವರಿಸಿ ಸಂಪೂರ್ಣವಾಗಿ ನಾಶವಾಗಿದ್ದು,, 9 ಮಂದಿ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಭೀಕರ ದುರಂತದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, 37 ಜನರು ಸುಟ್ಟ ಗಾಯಗಳಿಂದ ನರಳಾಡುತ್ತಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular