ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ವಿವೇಕ ನಗರದ ಆಸ್ಟಿನ್ ಟೌನ್ ನಲ್ಲಿ ನಡೆದಿದೆ.
ಬಾಡಿಗೆದಾರ ಇನಾಯತ್ ಪಾಷಾ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಮನೆ ಮಾಲೀಕ ಮಸ್ರೂರ್ ಅಹಮದ್ ಎಂಬಾತನಿಂದ ಕೃತ್ಯ ನಡೆದಿದೆ.
ಮನೆ ಕಾಲ್ ಮನೆ ಖಾಲಿ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಹಲ್ಲೆ ನಡೆಸಿ ಇನಾಯತ್ ನನ್ನು ಕೆಳಗೆ ತಳ್ಳಿ ಕೊಲೆ ಮಾಡಲಾಗಿದೆ ಎಂದು ಮಸ್ರೂರ್ ಅಹಮದ್ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. 10 ವರ್ಷದಿಂದ ಮನೆಯನ್ನು ಲೀಸ್ ಗೆ ಪಡೆದು ಇನಾಯತ್ ವಾಸವಾಗಿದ್ದರು. ಮನೆ ಖಾಲಿ ಮಾಡುವ ವಿಚಾರಕ್ಕೆ ಗಲಾಟೆಯಾಗಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ಪರಸ್ಪರ ನಿಂದಿಸಿದ್ದು, ಇನಾಯತ್ ಮೇಲೆ ಹಲ್ಲೆ ಮಾಡಿ ಮಸ್ರೂರ್ ಳಗೆ ತಳ್ಳಿದ್ದಾನೆ ಈ ವೇಳೆ ಕೆಳಗೆ ಬಿದ್ದು ಇನಾಯತ್ ಪಾಷಾ ಮೃತಪಟ್ಟಿದ್ದಾನೆ. ಆದರೆ ಸ್ಥಳೀಯರಿಗೆ ಆರೋಪಿ ಮಸ್ರೂರ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಇನಾಯತ್ ಮೃತಪಟ್ಟಿದ್ದಾನೆ ಎಂದು ಸುಳ್ಳು ಹೇಳಿದ್ದ.
ಸ್ಥಳೀಯರಿಗೆ ಸುಳ್ಳು ಹೇಳಿ ನಂಬಿಸಿ ಆರೋಪಿ ಪರಾರಿಯಾಗಿದ್ದಾನೆ. ಮಾರ್ಚ್ 1ರ ಭಾನುವಾರ ರಾತ್ರಿ ಘಟನೆ ನಡೆದಿತ್ತು. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ. ಎರಡು ದಿನಗಳ ನಂತರ ಕೊಲೆ ಎಂದು ಬೆಳಕಿಗೆ ಬಂದಿದೆ. ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

