HomeIndiaBREAKING : 'ಪ್ಯಾರಿಸ್ ಒಲಿಂಪಿಕ್ಸ್' ನಲ್ಲಿ ಭಾರತಕ್ಕೆ ಒಲಿದ 3 ನೇ ಪದಕ, ಸ್ವಪ್ನಿಲ್...

BREAKING : ‘ಪ್ಯಾರಿಸ್ ಒಲಿಂಪಿಕ್ಸ್’ ನಲ್ಲಿ ಭಾರತಕ್ಕೆ ಒಲಿದ 3 ನೇ ಪದಕ, ಸ್ವಪ್ನಿಲ್ ಕುಶಾಲೆಗೆ ಕಂಚು

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ನಲ್ಲಿ ಶೂಟರ್ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಪಡೆದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದೀಗ ಮೂರನೇ ಕಂಚಿನ ಪದಕ ಒಲಿದಿದೆ.

ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಗಳಿಸಿದ ಶೂಟರ್ ಸ್ವಪ್ನಿಲ್ ಕುಸಾಲೆ ಫೈನಲ್ ನಲ್ಲಿ ಒಟ್ಟು 590 ಅಂಕಗಳನ್ನು ಗಳಿಸಿದರು. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಸ್ವಪ್ನಿಲ್ ಕುಶಾಲೆ ಮಂಡಿಯೂರಿ ಶೂಟ್ ಮಾಡುವ ವಿಭಾಗದಲ್ಲಿ 153.03 (50.8, 50.9, 51.6) ಆರನೇ ಸ್ಥಾನದಲ್ಲಿದ್ದರು. ಇದಾದ ಬಳಿಕ ಪ್ರೋನ್ ಅಂದರೆ ನೆಲದ ಮೇಲೆ ಮಲಗಿ ಶೂಟ್ ಮಾಡುವ ವಿಭಾಗದಲ್ಲಿ 310.1 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಜಿಗಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular