BREAKING : ರಾತ್ರಿ ಒಟ್ಟಿಗೆ ಊಟ ಮಾಡಿ ಮಲಗಿದ್ದವರು ಚಿರನಿದ್ದೆಗೆ : ಧಾರವಾಡದಲ್ಲಿ ಸಾವಿನಲ್ಲೂ ಒಂದಾದ ವೃದ್ಧ ದಂಪತಿ.!

ಧಾರವಾಡ : ಧಾರವಾಡದಲ್ಲಿ ಮನ ಕಲುಕುವ ಘಟನೆ ನಡೆದಿದ್ದು, ರಾತ್ರಿ ಒಟ್ಟಿಗೆ ಊಟ ಮಾಡಿದ ವೃದ್ಧ ದಂಪತಿ ಬೆಳಗ್ಗೆ ಸಾವಿನಲ್ಲೂ ಒಂದಾಗಿದ್ದಾರೆ.

ಧಾರವಾಡದ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈಶ್ವರ ಹಾಗೂ ಅವರ ಪತ್ನಿ ವಯೋಸಹಜ ಖಾಯಿಯಿಂದ ಬಳಲುತ್ತಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ದಂಪತಿ ಬೆಳಗ್ಗೆ ಏಳಲೇ ಇಲ್ಲ. ಮಕ್ಕಳು ಅಪ್ಪ- ಅಮ್ಮನನ್ನು ಎಬ್ಬಿಸಲು ಹೋದಾಗ ಇಬ್ಬರು ಮೃತಪಟ್ಟಿರುವುದು ಗೊತ್ತಾಗಿದೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೃದ್ದ ದಂಪತಿಗಳಿಗೆ 4 ಜನ ಮಕ್ಕಳಿದ್ದರು. ಹಿಂದಿನ ದಿನ ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದ ದಂಪತಿಗಳು ಮರು ದಿನ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಮೂಲಕ ದಂಪತಿಗಳಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read