ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕನ ಕೊಲೆ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ.
ನಿಂಗರಾಜ್ ಆವಾರಿ(16) ಕೊಲೆಯಾದ ಬಾಲಕ. ಮೂವರು ಅಪ್ರಾಪ್ತರು ಕೃತ್ಯವೆಸಗಿದ್ದಾರೆ. ಅನುದಾನಿತ ಶಾಲೆಯಲ್ಲಿ ನಿಂಗರಾಜ್ ಎಸ್ಎಸ್ಎಲ್ಸಿ ಓದುತ್ತಿದ್ದ. ಶುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಅಪ್ರಾಪ್ತ ಬಾಲಕನ ಕೊಲೆ ಮಾಡಲಾಗಿದೆ. ಕೃತ್ಯವಸಗಿದ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

