ಬೆಂಗಳೂರು: ಹಿರಿಯೂರು ಸಮೀಪ ಸೀಬರ್ಡ್ ಬಸ್ ದುರಂತದ ಬೆನ್ನಲ್ಲೇ ಸೀಬರ್ಡ್ ಬಸ್ ಚಾಲಕನೊಬ್ಬನ ನಿರ್ಲಕ್ಷ್ಯ ಕಂಡು ಬಂದಿದೆ.
ಡ್ರಂಕ್ ಅಂಡ್ ಡ್ರೈವ್ ತಪಾಸಣೆಯ ವೇಳೆ ಚಾಲಕ ಸಿಕ್ಕಿ ಬಿದ್ದಿದ್ದಾನೆ. ಚಾಲಕ ಕುಡಿದು ಪ್ರಯಾಣಿಕರು ಇದ್ದ ಬಸ್ ಓಡಿಸುತ್ತಿದ್ದ. ಬೆಂಗಳೂರುನಿಂದ ಗೋವಾಕ್ಕೆ ಹೊರಟಿದ್ದ ಖಾಸಗಿ ಸೀಬರ್ಡ್ ಬಸ್ ಚಾಲನೆ ಮಾಡುತ್ತಿದ್ದ. ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ತಪಾಸಣೆ ನಡೆಸಿದಾಗ ಚಾಲಕ ಮದ್ಯಪಾನ ಮಾಡಿರುವುದು ಕಂಡು ಬಂದಿದ್ದು, ಕೂಡಲೇ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೇರೆ ಚಾಲಕನನ್ನು ವ್ಯವಸ್ಥೆ ಮಾಡಿ ಗೋವಾ ಬಸ್ ಕಳಿಸಿಕೊಡಲಾಗಿದೆ.

