ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತ ಗ್ರಾಮದಲ್ಲಿ ರೌಡಿಶೀಟರ್ ಮಹೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲುಕೋಟೆ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಭೀಮ, ಬಸವರಾಜ್, ಹೇಮಂತ್, ಸುಮಂತ್, ಶಶಾಂಕ್ ಬಂಧಿತ ಆರೋಪಿಗಳು. ತಮ್ಮನ್ನು ಕೊಲೆ ಮಾಡುತ್ತಾನೆ ಎನ್ನುವ ಭಯದಿಂದ ಗ್ಯಾಂಗ್ ಕಟ್ಟಿಕೊಂಡು ಮಹೇಶ್ ನನ್ನು ಭೀಮ ಕೊಲೆ ಮಾಡಿದ್ದಾನೆ. ನವೆಂಬರ್ 29ರಂದು ಅಮೃತ ಗ್ರಾಮದಲ್ಲಿ ಲಕ್ಷ್ಮಿಸಾಗರದ ಮಹೇಶ್ ಕೊಲೆ ಮಾಡಲಾಗಿತ್ತು.
ಸ್ನೇಹಿತರೊಂದಿಗೆ ಹೋಗುತ್ತಿದ್ದ ಮಹೇಶ್ ಬೈಕ್ ಗೆ ಕಾರ್ ನಿಂದ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಹೇಶನ ಮೇಲೆ ಗ್ಯಾಂಗ್ ಹಲ್ಲೆ ಮಾಡಿತ್ತು. ಗಾಯಗೊಂಡಿದ್ದ ರೌಡಿಶೀಟರ್ ಮಹೇಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇದೀಗ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

