ಹಾಸನ: ರೌಡಿಶೀಟರ್ ಜೆಸಿಬಿ ಮಂಜನ ಮೇಲೆ ರೌಡಿಶೀಟರ್ ಗಳಿಂದ ದಾಳಿ ನಡೆಸಲಾಗಿದೆ. ಹಾಸನದ ರಿಂಗ್ ರಸ್ತೆಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ನಿಂದ ತೀವ್ರ ತರ ದಾಳಿ ನಡೆದಿದೆ.
ಮನೆಯಲ್ಲಿದ್ದ ಮಂಜನನ್ನು ಮಾತನಾಡಬೇಕೆಂದು ಕರೆಸಿಕೊಂಡಿದ್ದ ಗ್ಯಾಂಗ್ ಹಲ್ಲೆ ನಡೆಸಿದೆ. ಬಾರ್ ಪಕ್ಕದಲ್ಲಿರುವ ರಸ್ತೆಯಲ್ಲಿ ಮಾತನಾಡುತ್ತಿದ್ದಾಗ ದಿಢೀರ್ ದಾಳಿ ಮಾಡಲಾಗಿದೆ. 20ಕ್ಕೂ ಹೆಚ್ಚು ಮಂದಿ ಪುಡಿ ರೌಡಿಗಳು ದಾಳಿ ಮಾಡಿ ಮಾರಕಾಸ್ತ್ರಗಳಿಂದ ಮಂಜನನ್ನು ಥಳಿಸಿದ್ದಾರೆ. ಗಾಯಗೊಂಡ ಮಂಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಡಾವಣೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

