ಬೆಂಗಳೂರು: ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಪುಡಿ ರೌಡಿಗಳು ಅಟ್ಟಹಾಸ ನಡೆಸಿದ್ದಾರೆ. ಐದಾರು ಜನ ಪುಡಿರೌಡಿಗಳು ಕಾರ್ ಮೇಲೆ ದಾಳಿ ಮಾಡಿದ್ದಾರೆ.
ಮಾರಕಾಸ್ತ್ರ, ಕಲ್ಲುಗಳಿಂದ ಕಾರ್ ನ ಗಾಜುಗಳನ್ನು ಒಡೆದು ಹಾಕಿ ಹಾನಿಗೊಳಿಸಿದ್ದು, ಕಾರ್ ನೊಳಗಿದ್ದ ಇಬ್ಬರು ಯುವಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕಾರ್ ನೊಳಗೆ ಇದ್ದ ಯುವಕರಿಬ್ಬರು ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿಯಲ್ಲಿ ದಾಳಿಯ ದೃಶ್ಯ ಸೆರೆಯಾಗಿದೆ.
ಬಶೀರ್ ಎಂಬಾತನ ಮನೆಗೆ ನುಗ್ಗಿ ಗ್ಯಾಂಗ್ ಹಲ್ಲೆ ಮಾಡಿದೆ. ಪಾನ್ ಶಾಪ್ ನಲ್ಲಿ ಬಾಟಲ್ ಗಳನ್ನು ಪುಡಿಗಟ್ಟಿ ಗ್ಯಾಂಗ್ ಪರಾರಿಯಾಗಿದೆ. ನಿನ್ನೆ ರಾತ್ರಿ ಒಂಬತ್ತು ಗಂಟೆಗೆ ಘಟನೆ ನಡೆದಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

