HomeKarnatakaBREAKING : ಪರಪ್ಪನ ಅಗ್ರಹಾರದಲ್ಲಿ 'ರಾಜಾತಿಥ್ಯ' ಪ್ರಕರಣ : ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್...

BREAKING : ಪರಪ್ಪನ ಅಗ್ರಹಾರದಲ್ಲಿ ‘ರಾಜಾತಿಥ್ಯ’ ಪ್ರಕರಣ : ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ ..!

ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ ಆಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಗೆ ರಾಜಾತಿಥ್ಯಾ ನೀಡಿರುವ ವಿಚಾರ ಭಾರಿ ಸುದ್ದಿಯಾಗಿತ್ತು, ಈ ಹಿನ್ನೆಲೆ ಬಳ್ಳಾರಿ ಜೈಲಿಗೆ ನಟ ದರ್ಶನ್ ಅವರನ್ನುಪೊಲೀಸರು  ಶಿಫ್ಟ್ ಮಾಡಿದ್ದಾರೆ.ಬಳ್ಳಾರಿಯ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ನಟ ದರ್ಶನ್ ಅವರನ್ನು ಇಡಲಾಗುತ್ತಿದ್ದು, ಈ ಸೆಲ್ ನೊಳಗೆ ಯಾರೂ ಎಂಟ್ರಿ ಕೊಡೋದಕ್ಕೆ ಅವಕಾಶ ಇರುವುದಿಲ್ಲ.

ಇಂದು 4:15 ಕ್ಕೆ ಬೆಂಗಳೂರಿನಿಂದ ಹೊರಟ ದರ್ಶನ್ ಮತ್ತು ಪೊಲೀಸರು ಇಂದು 9:50 ರ ಸುಮಾರಿಗೆ ಬಳ್ಳಾರಿ ತಲುಪಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕದ ಮಾರ್ಗ ಬಿಟ್ಟು ಆಂಧ್ರ, ತಿರುವನಂತಪುರಂ ಮಾರ್ಗದ ಮೂಲದ ನಟ ದರ್ಶನ್ ಅವರನ್ನು ಇಂದು ಬಳ್ಳಾರಿಗೆ ಕರೆ ತರಲಾಗಿದೆ.  ಬಿಗಿ ಭದ್ರತೆಯಲ್ಲಿ ಮೊದಲು ಬೋಲೇರೋ ವಾಹನದಲ್ಲಿ ದರ್ಶನ್ ಅವರನ್ನು ಕರೆತರಲಾಗಿತ್ತು. ನಂತರ ವಾಹನ ಬದಲಾಯಿಸಿ ಪೊಲೀಸ್ ಜೀಪ್ ಮೂಲಕ ಅವರನ್ನು ಕರೆತರಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular