ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಂಗ್ರೆಸ್ ಪಿಒಕೆ ನೀಡಿತ್ತು. ಆದರೆ ಪಿಒಕೆಯನ್ನು ಬಿಜೆಪಿ ವಾಪಸ್ ಪಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲವನ್ನು ಹಿಂದೂ ಮುಸ್ಲಿಂ ಎಂದು ನೋಡುತ್ತದೆ. ‘ಆಪರೇಷನ್ ಮಹಾದೇವ’ದಲ್ಲಿ ಹಿಂದೂ ಮುಸ್ಲಿಂ ಎಂದು ನೋಡಬೇಡಿ. ನಮ್ಮ ನಾಯಕತ್ವ ಬ್ರಹ್ಮೋಸ್ ಗಳನ್ನು ಕಳುಹಿಸುತ್ತದೆ. ದಾಖಲೆಗಳನ್ನಲ್ಲ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಆಪರೇಷನ್ ಸಿಂಧೂರ್ ನಲ್ಲಿ ಉಗ್ರರ ಕ್ಯಾಂಪ್ ದ್ವಂಸಗೊಳಿಸಿದ್ದೇವೆ. ಭಯೋತ್ಪಾದಕರ 9 ಕ್ಯಾಂಪುಗಳನ್ನು ಧ್ವಂಸ ಮಾಡಲಾಗಿದೆ. ಕಾಂಗ್ರೆಸ್ ಗೆ ದೇಶದ ಭದ್ರತೆ ಬೇಕಾಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಯಶಸ್ವಿಯಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಸೇನೆಯ ಬಗ್ಗೆ ಅಮಿತ್ ಷಾ ಪ್ರಶಂಸೆ ವ್ಯಕ್ತಪಡಿಸಿದ್ದು,
ಪಹಾಲ್ಗಾಂ ದಾಳಿಗೆ ಬಳಸಿದ ಶಾಸ್ತ್ರಾಸ್ತ್ರ ಪಾಕಿಸ್ತಾನದಲ್ಲೇ ತಯಾರಿಸಲಾಗಿದೆ ಎಂಬುದನ್ನು ಎಫ್ಎಸ್ಎಲ್ ವರದಿ ದೃಢಪಡಿಸಿದೆ. ದೇಶದ ಭದ್ರತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಮೇ 7ರಂದು ಪಾಕಿಸ್ತಾನದಲ್ಲಿ ಉಗ್ರರ 9 ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.