HomeKarnatakaBREAKING : ಕದ್ರಿ ದೇವಸ್ಥಾನ ಮಾತ್ರವಲ್ಲ, `ಉಡುಪಿ ಮಠ'ವೂ ಉಗ್ರರ ಟಾರ್ಗೆಟ್ ಆಗಿತ್ತು :...

BREAKING : ಕದ್ರಿ ದೇವಸ್ಥಾನ ಮಾತ್ರವಲ್ಲ, `ಉಡುಪಿ ಮಠ’ವೂ ಉಗ್ರರ ಟಾರ್ಗೆಟ್ ಆಗಿತ್ತು : `NIA’ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಬೆಂಗಳೂರು : ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳಿಗೆ ಇದೀಗ ಸ್ಪೋಟಕ ಮಾಹಿತಿಯೊಂದು ಸಿಕ್ಕಿದ್ದು, ಶಂಕಿತ ಉಗ್ರರು ಕದ್ರಿ ದೇವಸ್ಥಾನ ಮಾತ್ರವಲ್ಲದೇ ಉಡುಪಿ ಕೃಷ್ಣ ಮಠವನ್ನೂ ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ.

ಎನ್ ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖೆಯಲ್ಲಿ ಶಂಕಿತ ಉಗ್ರ ಅರಾಫತ್ ಅಲಿ ಸ್ಪೋಟಕ ಮಾಹಿತಿ ಬಾಯಿಬಿಟ್ಟಿದ್ದಾನೆ ಎನ್ನಲಾಗಿದ್ದು, ಶಂಕಿತ ಉಗ್ರರು ಕರ್ನಾಟಕದ ಮೂರು ಸ್ಥಳಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ದರು. ಈ ಪೈಕಿ ಕದ್ರಿ ದೇವಸ್ಥಾನ, ಉಡುಪಿಯ ಕೃಷ್ಣ ಮಠ ಹಾಗೂ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯನ್ನು ಬ್ಲಾಸ್ಟ್ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಎನ್ ಐಎ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ತಿಂಗಳು ಎನ್ ಐಎ ದೆಹಲಿಯ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರ ಅರಾಫತ್ ಅಲಿ ಎಂಬಾತನನ್ನು ವಿಚಾರಣೆ ನಡೆಸುತ್ತಿತ್ತು.  ತನಿಖೆ ವೇಳೆ ಸ್ಪೋಟಕ ಮಾಹಿತಿ ಬಾಯಿ ಬಿಟ್ಟಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular