HomeKarnatakaBREAKING : ವಿಧಾನಸಭೆಯಲ್ಲಿ ಮಹತ್ವದ 'ಮೈಕ್ರೋ ಫೈನಾನ್ಸ್' ವಿಧೇಯಕ ಅಂಗೀಕಾರ.!

BREAKING : ವಿಧಾನಸಭೆಯಲ್ಲಿ ಮಹತ್ವದ ‘ಮೈಕ್ರೋ ಫೈನಾನ್ಸ್’ ವಿಧೇಯಕ ಅಂಗೀಕಾರ.!

ಬೆಂಗಳೂರು : ವಿಧಾನಸಭೆಯಲ್ಲಿ ಇಂದು ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರವಾಗಿದೆ.
ಸ್ಪೀಕರ್ ಯುಟಿ ಖಾದರ್ ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕರಿಸಿದರು.

ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳ ತಪ್ಪಿಸುವ ಮಹತ್ವದ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕವನ್ನು ಅವರು ಅಂಗೀಕರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮೇಲೆ ವಿಧಾನಸೌಧದಲ್ಲಿ ಚರ್ಚೆ ನಡೆಯುತ್ತಿದೆ.

ವಿಧಾನಸಭೆಯಲ್ಲಿ ಕಳೆದ ಗುರುವಾರ ಅನಧಿಕೃತ ಅಥವಾ ನೋಂದಾಯಿತವಲ್ಲದ ಮೈಕ್ರೋಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಮತ್ತು ಕಿರುಕುಳಕ್ಕೆ ಕರಿವಾಣ ಹಾಕುವ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ವಸೂಲಾತಿ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ- 2025 ಮಂಡಿಸಲಾಗಿತ್ತು,ಅನಧಿಕೃತ ಹಾಗೂ ನೋಂದಾಯಿತವಲ್ಲದ ಮೈಕ್ರೋಫೈನಾನ್ಸ್ ಅಥವಾ ಲೇವಾದೇವಿದಾರರು ಸಾಲಗಾರನಿಂದ ಬಲವಂತದ ವಸೂಲಿಗೆ ಪ್ರಯತ್ನಿಸುವುದು ನಿಷಿದ್ಧವಾಗಿದೆ. ಒಂದೊಮ್ಮೆ ಸಾಲ ಪಡೆದಿರುವ ಸಮಾಜದ ದುರ್ಬಲ ವರ್ಗದವರ ಬಳಿ ಬಲವಂತ ಮಾಡಿದರೆ ಸಾಲಗಾರ ಪಡೆದಿರುವ ಸಾಲ ಮತ್ತು ಬಡ್ಡಿ ಮನ್ನಾ ಆಗಿದೆ ಎಂದು ಭಾವಿಸಬೇಕು ಎನ್ನುವ ಮಹತ್ವದ ಅಂಶವನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗಿದೆ.ಇಂತಹ ಸಂಸ್ಥೆ ಅಥವಾ ಲೇವಾದೇವಿದಾರರ ಸಾಲ ಬಡ್ಡಿ ವಸೂಲಿಗೆ ಹೂಡುವ ಯಾವುದೇ ದಾವೆ ಅಥವಾ ವ್ಯವಹಾರವನ್ನು ನ್ಯಾಯಾಲಯಗಳು ಪುರಸ್ಕರಿಸಬಾರದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಲಗಾರ ಅಥವಾ ಆತನೊಂದಿಗೆ ಯಾರ ವಿರುದ್ಧವಾದರೂ ಜಂಟಿಯಾಗಿ ದಾವೆ ಹೂಡಿದ್ದರೆ ತಕ್ಷಣದಿಂದ ರದ್ದಾಗಬೇಕು. ಯಾವುದೇ ಮೈಕ್ರೋಫೈನಾನ್ಸ್ ಸಂಸ್ಥೆಗಳು ಕಿರು ಸಾಲಕ್ಕೆ ಅಡಮಾನ ಇಟ್ಟುಕೊಂಡಿದ್ದರೆ ಅಂತಹ ಆಸ್ತಿ ವಸ್ತುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಹೇಳಲಾಗಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular