ಮೈಸೂರು: ಮೈಸೂರು ಹೊರವಲಯದ ಕೆಸರೆ ಬಡಾವಣೆಯಲ್ಲಿ ನಾಲ್ಕಕ್ಕೂ ಅಧಿಕ ಗೋದಾಮುಗಳಿಗೆ ಬೆಂಕಿ ತಗುಲಿದೆ.
ಭಾರೀ ಬೆಂಕಿಯಿಂದ ಗೋದಾಮಗಳು ಹೊತ್ತಿ ಉರಿದಿವೆ. ಹಳೆಯ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದ್ದ ಗೋದಾಮುಗಳು ಇವಾಗಿದ್ದು, ಭಾರೀ ಬೆಂಕಿಯಲ್ಲಿ ವಸ್ತುಗಳು ಸುಟ್ಟು ಕರಕಲಾಗಿವೆ. ಮೈಸೂರು -ಬೆಂಗಳೂರು ಹೆದ್ದಾರಿ ಬಳಿ ಇರುವ ಗೋದಾಮಗಳಲ್ಲಿ ಬೆಂಕಿಯಿಂದ ಗೋದಾಮುಗಳ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಮೈಸೂರಿನ ಎನ್ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

