ಬೆಂಗಳೂರು: ವಿದ್ಯಾರ್ಥಿ ಅಡ್ಡಾದಿಡ್ಡಿಯಾಗಿ ಕಾರ್ ಚಾಲನೆ ಮಾಡಿದ್ದರಿಂದ ಪಾದಚಾರಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನ 27ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.
ಡಿಸೆಂಬರ್ 22 ರಂದು ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಆಡಿ ಕಾರ್ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಮೂಲದ ಸಂತೋಷ್(26) ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ರಸ್ತೆ ಬದಿ ನಿಂತಿದ್ದ ಕಾರ್ ಗಳಿಗೂ ಡ್ಯಾಮೇಜ್ ಆಗಿದೆ.
ಕಾರ್ ಚಾಲಕ ಅಬ್ದುಲ್ ರೆಹಮಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಸಂತೋಷ್ ಕೆಲಸ ಮಾಡುತ್ತಿದ್ದ. ಮದ್ಯಸೇವನೆ ಮಾಡಿ ಅಡ್ಡಾದಿಡ್ಡಿಯಾಗಿ ರೆಹಮಾನ್ ಕಾರ್ ಚಾಲನೆ ಮಾಡಿದ್ದಾನೆ. ಮಿಂಚಿನಂತೆ ಬಂದ ಆಡಿ ಕಾರ್ ಡಿಕ್ಕಿ ಹೊಡೆದು ಸಂತೋಷ್ ಮೃತಪಟ್ಟಿದ್ದಾರೆ. ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ ಚಾಲಕ ಮದ್ಯ ಸೇವನೆ ಹಿನ್ನೆಲೆ ರಕ್ತದ ಮಾದರಿಯನ್ನು ಪರೀಕ್ಷೆಗೆ ರವಾನೆ ಮಾಡಲಾಗಿದೆ.

