HomeKarnatakaBREAKING : ಕಾರವಾರ ನೌಕಾನೆಲೆ ಗೌಪ್ಯ ಮಾಹಿತಿ ಸೋರಿಕೆ ಕೇಸ್ : 'NIA' ಯಿಂದ ಇಬ್ಬರು...

BREAKING : ಕಾರವಾರ ನೌಕಾನೆಲೆ ಗೌಪ್ಯ ಮಾಹಿತಿ ಸೋರಿಕೆ ಕೇಸ್ : ‘NIA’ ಯಿಂದ ಇಬ್ಬರು ಆರೋಪಿಗಳು ಅರೆಸ್ಟ್.!

ಕಾರವಾರ : ಕಾರವಾರ ನೌಕಾನೆಲೆ ಮಾಹಿತಿ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹಳವಳ್ಳಿಯ ಅಕ್ಷಯ್ ನಾಯ್ಕ್ ಹಾಗೂ ವೇತನ್ ತಾಂಡೇಲ್ ಎಂಬುವವರನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ.

ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಇವರು ಹಣಕ್ಕಾಗಿ ಸೀಬರ್ಡ್ ನೌಕಾನೆಲೆಯ ಫೋಟೋ ಹಾಗೂ ಇತರ ಮಾಹಿತಿಗಳನ್ನು ರವಾನಿಸುತ್ತಿದ್ದರು ಎಂಬ ಆರೋಪವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೀಬರ್ಡ್ ನೌಕಾನೆಲೆ ಸಿಬ್ಬಂದಿಗಳಿಗೆ ಹನಿಟ್ರ್ಯಾಪ್ ಮಾಡಿದ ಯುವತಿಯೊಬ್ಬಳು ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡಿದ್ದಾಳೆ ಎನ್ನಲಾಗಿದ್ದು, ಈ ಸಂಬಂಧ ಎನ್ ಐ ಎ ಇತ್ತೀಚೆಗೆ ತನಿಖೆ ನಡೆಸುತ್ತಿತ್ತು.ಕಾರವಾರದ ಸೀಬರ್ಡ್ ನೌಕಾನೆಲೆ ಸಿಬ್ಬಂದಿಗಳಿಗೆ ಫೇಸ್ ಬುಕ್ ಮೂಲಕ ರಿಕ್ವೆಸ್ಟ್ ಕಳುಹಿಸಿ ನಂತರ ಅವರ ಸ್ನೇಹ ಸಂಪಾದಿಸಿ ನೌಕಾನೆಲೆಯ ಬಗ್ಗೆ ಗೌಪ್ಯ ಮಾಹಿತಿಯನ್ನು ಕಲೆ ಹಾಕಿ ಅದನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದಳು.ಕಾರವಾರ ತಾಲೂಕಿನ ತೋಡೂರು ಗ್ರಾಮದ ಸುನೀಲ್ ನಾಯ್ಕ್, ಮುದ್ಗಾ ಗ್ರಾಮದ ವೇತನ್  ತಾಂಡೇಲ್ ಮತ್ತು ಹಳವಳ್ಳಿ ಗ್ರಾಮದ ಅಕ್ಷಯ್ ರವಿ ನಾಯ್ಕ್ ಎಂಬುವವರನ್ನು ಎನ್ ಐ ಎ ವಿಚಾರಣೆ ಪಡಿಸಿ ಕಳುಹಿಸಿದ್ದರು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular