ಕಾರವಾರ: ಜೆಡಿಎಸ್ ನಾಯಕಿ ಪುತ್ರನ ಕಿರುಕುಳದಿಂದ ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ಘಟನೆ ನಡೆದಿದೆ.
ಕೆಪಿಸಿಎಲ್ ಕಾಲೋನಿಯ ನಿವಾಸದಲ್ಲಿ 20 ವರ್ಷದ ರಿಶಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸುವಂತೆ riಶಾಲ್ ಡಿಸೋಜಾಗೆ ಜೆಡಿಎಸ್ ನಾಯಕಿ ಚೈತ್ರಾ ಕೋಠಾರಕರ್ ಪುತ್ರ ಚಿರಾಗ್ ಚಂದ್ರಹಾಸ್ ಕೋಠಾರಕರ್ ಪೀಡಿಸುತ್ತಿದ್ದ ಆರೋಪ ಕೇಳಿ ಬಂದಿದೆ. ರಿಶಾಲ್ ತಂದೆ ಕ್ರಿಸ್ತೋದ್ ಫ್ರಾನ್ಸಿಸ್ ಈ ಕುರಿತಾಗಿ ನೀಡಿದ್ದ ದೂರಿನ ಮೇರೆಗೆ ಚಿರಾಗ್ ಚಂದ್ರಹಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮನೆಯ ಬಳಿ ಬಂದು ಪ್ರೀತಿಸುವಂತೆ ಚಿರಾಗ್ ಪೀಡಿಸುತ್ತಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಬೇಗ ಸತ್ತು ಹೋಗು ಎಂದು ಹೇಳಿದ್ದ. ಇದರಿಂದ ಮನನೊಂದು ರಿಶಾಲ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

