HomeKarnatakaBREAKING: ಅಂತರರಾಜ್ಯ ಸರಗಳ್ಳರು ಅರೆಸ್ಟ್: 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ

BREAKING: ಅಂತರರಾಜ್ಯ ಸರಗಳ್ಳರು ಅರೆಸ್ಟ್: 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ

ಶಿವಮೊಗ್ಗ: ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಸರಗಳ್ಳರು ಮತ್ತು ಒಂಟಿ ಮನೆ ದರೋಡೆಕೋರರ ಬಂಧಿಸಿದ್ದಾರೆ.

ದಿನಾಂಕ 18/11/2025 ರಂದು ಮದ್ಯಾಹ್ನ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆ ವಿನೋಬನಗರ 16 ಕ್ರಾಸ್ ನ ರಸ್ತೆಯಲ್ಲಿ ಒಬ್ಬ ಮಹಿಳೆಯು ನಡೆದುಕೊಂಡು ಹೋಗುವಾಗ ಯಾರೋ ಒಬ್ಬ ಅಪರಿಚಿತ ವ್ಯೆಕ್ತಿ ಹಿಂಬದಿಯಿಂದ ನಡೆದುಕೊಂಡು ಬಂದು ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ತಳ್ಳಿ ಸ್ವಲ್ಪ ದೂರದಲ್ಲಿ ಬೈಕ್ ಸ್ಟಾಟ್ ಮಾಡಿಕೊಂಡು ಕಾಯುತ್ತಿದ್ದ ವ್ಯಕ್ತಿಯ ಬೈಕ್ ಹತ್ತಿಕೊಂಡು ಹೋಗಿದ್ದು.  ಈ ಬಗ್ಗೆ ಪಿರ್ಯಾದುದಾರರಾದ ಹೊನ್ನಮ್ಮ ಅವರು ದೂರು ನೀಡಿದ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣದಲ್ಲಿ ಕಿತ್ತುಕೊಂಡು ಹೋದ ಬಂಗಾರದ ಮಾಂಗಲ್ಯ ಸರ ಮತ್ತು ಆರೋಪಿತರನ್ನು ಪತ್ತೆ ಮಾಡಲು ಎಸ್ಪಿ ನಿಖಿಲ್ ಬಿ., ಎಎಸ್ಪಿ ಕಾರಿಯಪ್ಪ, ರಮೇಶ್, ಡಿವೈಎಸ್ಪಿ ಸಂಜೀವ್ ಕುಮಾರ್ ಟಿ. ಮಾರ್ಗದರ್ಶನದಲ್ಲಿ ವಿನೋಬನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಸಂತೋಷಕುಮಾರ್ ಡಿ.ಕೆ. ಉಸ್ತುವಾರಿಯಲ್ಲಿ ಪಿಎಸ್ಐ ತಿರುಮಲೇಶ್ ಜಿ. ಮತ್ತು ಸಿಬ್ಬಂದಿಗಳಾದ ರಾಜು, ಚಂದ್ರಾನಾಯ್ಕ, ಮಲ್ಲಪ್ಪ,  ಅರುಣಕುಮಾರ್ ಎನ್.ಕೆ., ಮನುಶಂಕರ ಅವರ ತಂಡ ರಚಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿತರ ಪತ್ತೆಯಲ್ಲಿ ಮಾಹಿತಿ ಸಂಗ್ರಹಿಸಿ ಸರ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತನಾದ ತಮಿಳುನಾಡು ಕೊಯಮತ್ತೂರು ಸೋಮಾಸಿಪಡಿ ಗ್ರಾಮ ನಿವಾಸಿ ಅರಸು @ ವಲ್ಲರಸು ಆರ್.(25), ಬೆಂಗಳೂರು ಗೋರಿ ಪಾಳ್ಯ 1ನೇ ಕ್ರಾಸ್ ಜೆ.ಜೆ.ಆರ್ ನಗರ ಪಾದರಾಯಪುರ ಗುಡ್ಡದಹಳ್ಳಿ ಹತ್ತಿರದ ಕಾಲು @ ಇಬ್ರಾಹಿಂ ಪಾಶಾ, ತಮಿಳುನಾಡಿನ ಬೆಂಗಳೂರಿನಲ್ಲಿ ವಾಸವಾಗಿರುವ ಕೇಶವನ್(43), ಸತೀಶ್ ಕುಮಾರ್(40) ಅವರನ್ನು ವಶಕ್ಕೆ ಪಡೆದುಕೊಂಡು ವಲ್ಲರಸು ಮತ್ತು ಇಬ್ರಾಹಿಂ ಪಾಶಾ ಆರೋಪಿತರ ಕಡೆಯಿಂದ 40 ಗ್ರಾಂ ತೂಕದ ಬಂಗಾರದ ಗಟ್ಟಿ ಬಂಗಾರ ಅದರ ಬೆಲೆ 4,80,000 ರೂ. ಮೌಲ್ಯದ ಸರ, ಕೃತ್ಯಕ್ಕೆ ಉಪಯೋಗಿಸಿದ 1,50,000 ರೂ.ನ ಬಜಾಜ್ ಪಲ್ಸರ್, ಕೇಶವನ್ ಕಡೆಯಿಂದ  8,50,000 ರೂ. ಮೌಲ್ಯದ 70 ಗ್ರಾಂ ತೂಕದ ಮಾಂಗಲ್ಯ ಸರ, ಇದು ಮೈಸೂರು ಪಿರಿಯಾಪಟ್ಟಣ ಠಾಣೆ ಕೇಸಿಗೆ ಸಂಬಂಧಿಸಿದ್ದು ಹಾಗೂ 60 ಗ್ರಾಂ ತೂಕದ ಬಂಗಾರದ ಆಭರಣಗಳು ಅದರ ಬೆಲೆ 10,20,000 ರೂ. ಇವು ವಿನೋಬನಗರ ಠಾಣೆ ಸಂಬಂಧಿಸಿದ್ದವುಗಳು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಅಂದಾಜು ಮೌಲ್ಯ 25,00,000/- ರೂ ಗಳಾಗಿರುತ್ತವೆ.

ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಶ್ಲಾಘಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular