ನವದೆಹಲಿ: ದೆಹಲಿಯಿಂದ ಬ್ರಿಟನ್’ನ ಮ್ಯಾಂಚೆಸ್ಟರ್ಗೆ ಹೊರಟಿದ್ದ ಇಂಡಿಗೋ ವಿಮಾನವೊಂದು ಸೋಮವಾರ ಇಥಿಯೋಪಿಯಾ ಗಡಿಯ ಸಮೀಪ ಆಕಸ್ಮಿಕವಾಗಿ ಯು-ಟರ್ನ್ ಪಡೆದು ದೆಹಲಿಗೆ ಮರಳಿದೆ. ಈ ಹಠಾತ್ ತಿರುವಿಗೆ ನಿಖರವಾದ ಕಾರಣಗಳು ತಕ್ಷಣಕ್ಕೆ ತಿಳಿದುಬಂದಿಲ್ಲ
ಬೋಯಿಂಗ್ 787-9 ಡ್ರೀಮ್ಲೈನರ್ ಮಾದರಿಯ ಈ ವಿಮಾನವು (ಫ್ಲೈಟ್ ಸಂಖ್ಯೆ 6E33) ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮ್ಯಾಂಚೆಸ್ಟರ್ಗೆ ಪ್ರಯಾಣ ಬೆಳೆಸಿತ್ತು.
ಫ್ಲೈಟ್ ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ವಿಮಾನವು ಇಥಿಯೋಪಿಯಾ ಗಡಿಯ ಸಮೀಪವಿರುವ ವಾಯುಪ್ರದೇಶವನ್ನು ತಲುಪಿದಾಗ ಇದ್ದಕ್ಕಿದ್ದಂತೆ ಮಧ್ಯದಲ್ಲೇ ಹಿಂತಿರುಗಿದೆ. ನಂತರ ವಿಮಾನವು ಮತ್ತೆ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿತು.
ಸ್ಪಷ್ಟನೆ ಇಲ್ಲ: ವಿಮಾನವು ಅರ್ಧದಲ್ಲೇ ಹಿಂತಿರುಗಲು ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಈ ಕುರಿತು ಇಂಡಿಗೋ ಏರ್ಲೈನ್ಸ್ ಅಧಿಕಾರಿಗಳು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ತಾಂತ್ರಿಕ ದೋಷ ಅಥವಾ ವಾಯುಪ್ರದೇಶದ ಅನುಮತಿ ಸಮಸ್ಯೆಗಳಿಂದ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಅಧಿಕೃತ ಮಾಹಿತಿ ಬಂದ ನಂತರ ಹೆಚ್ಚಿನ ವಿವರಗಳು ತಿಳಿಯಲಿವೆ.

