HomeKarnatakaBREAKING : ದಾವಣಗೆರೆಯಲ್ಲಿ ಘೋರ ಘಟನೆ : ಮನೆ ಮುಂದಿನ ನೀರಿಗೆ ಬಿದ್ದು 1 ವರ್ಷದ...

BREAKING : ದಾವಣಗೆರೆಯಲ್ಲಿ ಘೋರ ಘಟನೆ : ಮನೆ ಮುಂದಿನ ನೀರಿಗೆ ಬಿದ್ದು 1 ವರ್ಷದ ಕಂದಮ್ಮ ಸಾವು.!

ದಾವಣಗೆರೆಯಲ್ಲಿ : ದಾವಣಗೆರೆಯಲ್ಲಿ ಘೋರ ಘಟನೆ ನಡೆದಿದ್ದು, ಮನೆ ಮುಂದಿನ ನೀರಿಗೆ ಬಿದ್ದು 1 ವರ್ಷದ ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಡೆದಿದೆ.

ಹಿರೇಮಲ್ಲನಹೊಳೆ ಗ್ರಾಮದಲ್ಲಿ ಕೆರೆಕೋಡಿ ಹರಿದು ಮನೆ ಮುಂದೆ ನೀರು ಬಂದಿತ್ತು. ಈ ವೇಳೆ ಆಟವಾಡುತ್ತಾ ನೀರಿನ ಬಳಿ ಹೋದ ಮಗು ನೀರಿಗೆ ಬಿದ್ದು ಮೃತಪಟ್ಟಿದೆ.

ಘಟನೆ ನಡೆದ ಸ್ಥಳಕ್ಕೆ ಜಗಳೂರು ಶಾಸಕ ಬಿ.ದೇವೇಂದ್ರ ಭೇಟಿ ನೀಡಿ ಮೃತಪಟ್ಟ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿಕ್ಕಮಕ್ಕಳಿರುವ ಪೋಷಕರು ಇಂತಹ ಅವಘಡ ನಡೆಯದಂತೆ ಎಚ್ಚರ ವಹಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular