ಯಾದಗಿರಿ: 13 ಸಾವಿರ ರೂಪಾಯಿ ಲಂಚ ಪಡೆಯುವಾಗ ಹೆಡ್ ಕಾನ್ ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಯಾದಗಿರಿ ಸಂಚಾರಿ ಠಾಣೆಯ ಹೆಡ್ ಕಾನ್ ಸ್ಟೇಬಲ್ ನಾಗೇಶ್ ಲೋಕಾಯುಕ್ತ ಬಲೆಗೆ ಬಿದ್ದವರು.
ಅಪಘಾತಕ್ಕೆ ಒಳಗಾಗಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ. 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಾಗೇಶ್ 13 ಸಾವಿರ ರೂ. ಪಡೆಯುತ್ತಿದ್ದರು. ಮುದ್ನಾಳ ತಾಂಡಾದ ಅನ್ಯಾ ರಾಥೋಡ್ ಅವರಿಂದ ಲಂಚ ಪಡೆಯುತ್ತಿದ್ದರು.
ಹೆಡ್ ಕಾನ್ ಸ್ಟೇಬಲ್ ನಾಗೇಶ್ ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಜಾಕೀರ್ ಇನಾಮದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

