ಬೆಂಗಳೂರು: ರಾಜ್ಯಪಾಲರು ಇದ್ಧ ವಿಮಾನ ಲ್ಯಾಂಡ್ ಆಗದೆ ಬೆಂಗಳೂರಿನಿಂದ ಮಂಗಳೂರಿಗೆ ವಾಪಸ್ ಆಗಿದೆ. ಮಳೆ ಹಿನ್ನೆಲೆಯಲ್ಲಿ ವಿಮಾನ ಲ್ಯಾಂಡ್ ಮಾಡಲಾಗದೆ ಮಂಗಳೂರಿಗೆ ವಾಪಸ್ ತೆರಳಿದೆ.
ಮಂಗಳೂರಿಗೆ ಏರ್ ಇಂಡಿಯಾ ವಿಮಾನ ವಾಪಸ್ ತೆರಳಿದೆ. ಸಂಜೆ 5:45ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ ಲ್ಯಾಂಡಿಂಗ್ ಗೆ ಕ್ಲಿಯರೆನ್ಸ್ ಇಲ್ಲದ ಕಾರಣ ಮತ್ತೆ ವಾಪಸ್ ತೆರಳಿದೆ,
ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಮಳೆ ಕಾರಣಕ್ಕೆ ವಿಮಾನ ಲ್ಯಾಂಡಿಂಗ್ ಗೆ ಕ್ಲಿಯರೆನ್ಸ್ ಸಿಕ್ಕಿಲ್ಲ. ಹೀಗಾಗಿ ವಿಮಾನ ಮಂಗಳೂರಿಗೆ ವಾಪಸ್ ಆಗಿದೆ ಎಂದು ಹೇಳಲಾಗಿದೆ.

