ಬೆಂಗಳೂರು: ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಹಿನ್ನಡೆಯಾಗಿದೆ. ಅರಣ್ಯ ಇಲಾಖೆಗೆ ಭೂಮಿ ಬಿಟ್ಟು ಕೊಡುವಂತೆ ಆದೇಶಿಸಲಾಗಿದೆ.
ಮೇಲ್ಮನವಿ ಪ್ರಾಧಿಕಾರ, ಅರಣ್ಯ ಸಂರಕ್ಷಣಾಧಿಕಾರಿಗಳ ಕೋರ್ಟ್ ಈ ಕುರಿತಾಗಿ ಆದೇಶಿಸಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ 60.23 ಎಕರೆ ಒತ್ತುವರಿ ಆರೋಪ ಕೇಳಿ ಬಂದಿದೆ. 64(ಎ) ಅನ್ವಯ ಒತ್ತುವರಿ ಭೂಮಿ ತೆರವುಗೊಳಿಸಲು ಆದೇಶಿಸಲಾಗಿದೆ.
ರಮೇಶ್ ಕುಮಾರ್ ಸಲ್ಲಿಸಿದ ಮೇಲ್ಮನವಿಗೆ ಅರ್ಹತೆ ಇಲ್ಲವೆಂದು ವಜಾಗೊಳಿಸಲಾಗಿದೆ. 2025 ಜನವರಿ 15, 16ರಂದು ನಡೆಸಿದ ಸಮೀಕ್ಷೆಯ ವರದಿ ಆಧರಿಸಿ ಆದೇಶ ನೀಡಲಾಗಿದೆ. ಆದೇಶ ಸ್ವೀಕರಿಸಿದ 30 ದಿನದೊಳಗೆ ಭೂಮಿ ಬಿಟ್ಟು ಕೊಡುವಂತೆ ಆದೇಶಿಸಲಾಗಿದೆ. ಶಾಂತಿಯುತವಾಗಿ ಭೂಮಿಯ ಹಸ್ತಾಂತರಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ. ನಿಗದಿತ ಅವಧಿ ಒಳಗೆ ಆದೇಶ ಪಾಲಿಸಲು ವಿಫಲರಾದರೆ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ತೆರವಿಗೆ ಸೂಚನೆ ನೀಡಲಾಗಿದೆ.

