ನವದೆಹಲಿ: ಸಿಲಿಂಡರ್ ಇಲ್ಲದೆ ಪರದಾಡುತ್ತಿದ್ದ ಹೋಟೆಲ್ ಮಾಲೀಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೋಟೆಲ್ ಗಳಿಗೆ ಹೆಚ್ಚುವರಿ ಸಿಲಿಂಡರ್ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಹೋಟೆಲ್ ಗಳಿಗೆ ಶೇಕಡ 20ರಷ್ಟು ಹೆಚ್ಚುವರಿ ವಾಣಿಜ್ಯ ಸಿಲಿಂಡರ್ ಪೂರೈಕೆಗೆ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇಕಡ 20ರಷ್ಟು ಸಿಲಿಂಡರ್ ಗಳನ್ನು ಸರಬರಾಜು ಮಾಡಲಾಗುವುದು.
ಹೆಚ್ಚುವರಿಯಾಗಿ ಶೇಕಡ 20ರಷ್ಟು ಸಿಲಿಂಡರ್ ಗಳನ್ನು ಹಂಚಿಕೆ ಮಾಡಲಾಗುವುದು. ಸೋಮವಾರದಿಂದ ಎಲ್ಲಾ ರಾಜ್ಯಗಳಿಗೆ ಸಿಲಿಂಡರ್ ಪೂರೈಕೆಯಾಗಲಿದೆ ಎಂದು ಹೇಳಲಾಗಿದೆ.
150 ಕೋಟಿ ರೂ. ನಷ್ಟ
ವಾಣಿಜ್ಯ ಸಿಲಿಂಡರ್ ಬಳಕೆ ಅಭಾವದಿಂದ ಅಪಾರ ನಷ್ಟವಾಗಿದೆ. ಬೆಂಗಳೂರು ಹೋಟೆಲ್ ಗಳಿಗೆ 150 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.

