ನವದೆಹಲಿ: ಬಜೆಟ್ ಮಂಡನೆಗೂ ಮುನ್ನ ಚಿನ್ನ, ಬೆಳ್ಳಿ ದರ ಭಾರಿ ಇಳಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿ ದರದಲ್ಲಿ 27 ಸಾವಿರ ರೂಪಾಯಿ ಕಡಿಮೆಯಾಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 9000 ರೂ. ಇಳಿಕೆಯಾಗಿದೆ.
MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 13,468 ರೂ., ಬೆಳ್ಳಿ ಬೆಲೆ 2,65,652 ರೂ. ಇಳಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, COMEX ಚಿನ್ನದ ಬೆಲೆ ಶೇ. 8.35 ರಷ್ಟು ಇಳಿಕೆಯಾಗಿದ್ದು, ಟ್ರಾಯ್ ಔನ್ಸ್ಗೆ ಸರಿಸುಮಾರು USD 4907.5 ಕ್ಕೆ ತಲುಪಿದೆ. ಬೆಳಿಗ್ಗೆ 9:45 ಕ್ಕೆ ಸ್ಪಾಟ್ ಚಿನ್ನದ ಬೆಲೆ ಔನ್ಸ್ಗೆ USD 4,893.2 ಆಗಿದ್ದು, USD 434.45 ಅಥವಾ ಶೇಕಡಾ 8.15 ರಷ್ಟು ಇಳಿಕೆಯಾಗಿದೆ.

