HomeLatest NewsBREAKING : ಮೈಸೂರು ದಸರಾಗೆ 'ಗೊಂಬೆ ಬಲೂನ್' ಮಾರಲು ಬಂದಿದ್ದ ಬಾಲಕಿ ಶವವಾಗಿ ಪತ್ತೆ.!

BREAKING : ಮೈಸೂರು ದಸರಾಗೆ ‘ಗೊಂಬೆ ಬಲೂನ್’ ಮಾರಲು ಬಂದಿದ್ದ ಬಾಲಕಿ ಶವವಾಗಿ ಪತ್ತೆ.!

ಮೈಸೂರು : ಮೈಸೂರು ದಸರಾಗೆ ಗೊಂಬೆ ಬಲೂನ್ ಮಾರಲು ಬಂದಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

ಮೈಸೂರು ನಗರದ ವಸ್ತು ಪ್ರದರ್ಶನ ಮುಂಭಾಗ ಸುಮಾರು 10-13 ವರ್ಷದ ಬಾಲಕಿ ಶವ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಾಲಕಿ ಮೈಸೂರು ದಸರಾಗೆ ಗೊಂಬೆ ಬಲೂನ್ ಮಾರಲು ಬಂದಿದ್ದಳು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಜಾಗದಲ್ಲಿ ಮೊನ್ನೆ ವೆಂಕಟೇಶ್ ಎಂಬುವವರ ಕೊಲೆಯಾಗಿತ್ತು.

ಮೈಸೂರಿನಲ್ಲಿ ಯುವಕನ ಮರ್ಡರ್
ಹಾಡಹಗಲೇ ಯುವಕನ ಬರ್ಬರ ಹತ್ಯೆಯಾದ ಘಟನೆ ಮೈಸೂರು ನಗರದ ವಸ್ತು ಪ್ರದರ್ಶನ ಮುಂಭಾಗ ನಡೆದಿತ್ತು. ಕ್ಯಾತಮಾರನಹಳ್ಳಿ ನಿವಾಸಿ ಗಿಲ್ಕಿ ವೆಂಕಟೇಶ್ ಕೊಲೆಯಾದ ಯುವಕ. 4-5 ಮಂದಿ ಯುವಕರ ಗುಂಪು ಬಂದು ಯುವಕನ ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular