ಬಾಗಲಕೋಟೆ: ಗುಜರಿ ಪ್ಲಾಸ್ಟಿಕ್ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದ ಕಮತಗಿ ರಸ್ತೆಯ ಬಳಿ ನಡೆದಿದೆ.
ಭಾರೀ ಅಗ್ನಿ ಅವಘಡದಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಲಕ್ಷ್ಮಪ್ಪ ಭಜಂತ್ರಿ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ತಗುಲಿದೆ. ಬಾದಾಮಿ ಪಟ್ಟಣದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

