ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಕಂಪನದ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ. ಸಂಜೆ 4:40ರ ಸುಮಾರಿಗೆ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ. ನಿನ್ನೆ ರಾತ್ರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನ ಉಂಟಾಗಿತ್ತು.
ದೆಹಲಿಯಲ್ಲಿ ಬುಧವಾರ ಸಂಜೆ 4:42 ರ ಸುಮಾರಿಗೆ ಮತ್ತೆ ಭೂಕಂಪನದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ನವದೆಹಲಿಯ 5 ಕಿಮೀ ಆಳದಲ್ಲಿ 2.7 ತೀವ್ರತೆಯ ಭೂಕಂಪ ಸಂಭವಿಸಿದೆ.
ಮಂಗಳವಾರ ರಾತ್ರಿ 10:17 ರ ಸುಮಾರಿಗೆ 6.6 ತೀವ್ರತೆಯ ಭೂಕಂಪದ ನಂತರ ಉತ್ತರ ಭಾರತ ಭಾಗಗಳಲ್ಲಿ ಕಂಪನ ಉಂಟಾಗಿತ್ತು. ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಇದು 156 ಕಿಮೀ ಆಳದಲ್ಲಿ ಕೇಂದ್ರಬಿಂದು ಕಂಡು ಬಂದಿತ್ತು.
Earthquake of Magnitude:2.7, Occurred on 22-03-2023, 16:42:35 IST, Lat: 28.66 & Long: 77.03, Depth: 5 Km ,Location: 17km WNW of New Delhi, India for more information Download the BhooKamp App https://t.co/fcjrL6M4Lb@Indiametdept @ndmaindia @Dr_Mishra1966 @DDNational @Ravi_MoES pic.twitter.com/20aQlnIS8f
— National Center for Seismology (@NCS_Earthquake) March 22, 2023


