HomeKarnatakaBREAKING: ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಇ-ಹರಾಜು

BREAKING: ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಇ-ಹರಾಜು

ಬೆಂಗಳೂರು: ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಇ-ಹರಾಜು ಕೈಗೊಳ್ಳಲಾಗಿದ್ದು, ಜುಲೈ 24 ರಿಂದ 31ರವರೆಗೆ ಮದ್ಯದ ಸನ್ನದು ನೇರ ಹರಾಜು ಪ್ರಕ್ರಿಯೆ ನಡೆಯಲಿದೆ.

ಒಟ್ಟು 579 ಮದ್ಯದ ಸನ್ನದುಗಳನ್ನು ಹರಾಜು ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ ಹಂಚಿಕೆಗೆ ಇ-ಹರಾಜು ಪ್ರಕ್ರಿಯೆ ನಡೆಸಲಾಗುವುದು. ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಜುಲೈ 3ರಿಂದಲೇ ಬಿಡ್ ದಾರರ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಜುಲೈ 31ರವರೆಗೆ ವಿವಿಧ ಹಂತಗಳಲ್ಲಿ ನೇರ ಹರಾಜು ನಡೆಯಲಿದೆ.

ಈ ಇ-ಹರಾಜು ಪ್ರಕ್ರಿಯೆಯು ಅಧಿಕೃತ ವೆಬ್‌ಸೈಟ್ ಆದ https://www.mstcecommerce.com ಮೂಲಕ ನಡೆಯಲಿದ್ದು, ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ ನೀಡುವ ವರ್ಷವನ್ನು ಒಳಗೊಂಡಂತೆ ಒಟ್ಟು ಐದು ಅಬಕಾರಿ ವರ್ಷಗಳ ಅವಧಿಗೆ ಅಂದರೆ 2026-27 ರಿಂದ 2030-31 ರವರೆಗೆ ಸನ್ಮದುಗಳನ್ನು ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಇ-ಹರಾಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಿಯಮಾನುಸಾರ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದರಂತೆ ಪರಿಶಿಷ್ಟ ಜಾತಿ-ಎ ಗೆ ಶೇ 5.25, ಬಿ ಗೆ ಶೇ 5.25, ಸಿ ಗೆ ಶೇ 4.5 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 3 ರಷ್ಟು ಮೀಸಲಾತಿ ಇರಲಿದೆ. ಜುಲೈ 24 ರಿಂದ 31ರವರೆಗೆ ನೇರ ಇ-ಹರಾಜು ಪ್ರಕ್ರಿಯೆ ನಡೆಸಲಾಗುವುದು ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular