BREAKING : ಚಿಕ್ಕಮಗಳೂರಿನ ಶಂಕರಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ

ಚಿಕ್ಕಮಗಳೂರು:ಚಿಕ್ಕಮಗಳೂರಿನ ಶಂಕರಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಶ್ರೀರಾಮಸೇನೆಯ ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ದಾರೆ.

ಇಂದಿನಿಂದ 7 ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದ್ದು, ನವೆಂಬರ್ 5ರಂದು ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಶ್ರೀರಾಮ ಸೇನೆ ನೇತೃತ್ವದಲ್ಲಿ ದತ್ತಾಮಾಲ ಅಭಿಯಾನ ನಡೆಯಲಿದ್ದು, ಈ ಬಾರಿ 7 ಪ್ರಮುಖ ಬೇಡಿಕೆ ಮುದ್ದಿಟ್ಟುಕೊಂಡು ದತ್ತಾಮಾಲ ಅಭಿಯಾನ ಕೈಗೊಳ್ಳಲಾಗುತ್ತಿದೆ.

ಕಾಣೆಯಾದ ಅಮೂಲ್ಯ ವಿಗ್ರಹಗಳ ಬಗ್ಗೆ ತನಿಖೆ ನಡೆಸಬೇಕು, ಸ್ಥಳದಲ್ಲಿ ಇಸ್ಲಾಂ ಚಟುವಟಿಕೆ ಅವಕಾಶ ನೀಡದಂತೆ ಪಟ್ಟು,  ನವೆಂಬರ್ 6 ರಂದು ದತ್ತಪೀಠದ ಹೋಮ ಮತ್ತು ದತ್ತು ಪಾದುಕೆ ದರ್ಶನ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ  ದತ್ತ ಮಾಲಾಧಾರಿಗಳು ಆಗಮಿಸುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read