HomeKarnatakaBREAKING : ವಿಧಾನಸೌಧದ ಬಳಿ ಕಾಲಿಗೆ ಪಂಚೆ ಸಿಲುಕಿ ಮುಗ್ಗರಿಸಿದ CM ಸಿದ್ದರಾಮಯ್ಯ.!

BREAKING : ವಿಧಾನಸೌಧದ ಬಳಿ ಕಾಲಿಗೆ ಪಂಚೆ ಸಿಲುಕಿ ಮುಗ್ಗರಿಸಿದ CM ಸಿದ್ದರಾಮಯ್ಯ.!

ಬೆಂಗಳೂರು : ವಿಧಾನಸೌಧದ ಬಳಿ ಕಾಲಿಗೆ ಪಂಚೆ ಸಿಲುಕಿ ಸಿಎಂ ಸಿದ್ದರಾಮಯ್ಯ ಅವರು ಮುಗ್ಗರಿಸಿದ ಘಟನೆ ನಡೆದಿದೆ.

ವಿಧಾನಸೌಧದ ಬಳಿ ಕಾರು ಹತ್ತುವಾಗ ಕಾಲಿಗೆ ಪಂಚೆ ಸಿಲುಕಿ ಸಿಎಂ ಸಿದ್ದರಾಮಯ್ಯ ಮುಗ್ಗರಿಸಿದ್ದು, ಜೊತೆಯಲ್ಲಿದ್ದ ಗನ್ ಮ್ಯಾನ್ ಹಾಗೂ ಶಾಸಕರು ತಕ್ಷಣ ಅವರನ್ನು ಹಿಡಿದುಕೊಂಡಿದ್ದಾರೆ.

ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲಾ ಮೊಕದ್ದಮೆ ವಾಪಸ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಡು – ನುಡಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ದಾಖಲಾದ ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲಾ ಮೊಕದ್ದಮೆಯನ್ನು ವಾಪಾಸ್ ಪಡೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. 2023 ಕ್ಕೆ ನಾಮಕರಣ ಆಗಿ 50 ವರ್ಷ ತುಂಬಿದರೂ ಆಗಿನ ಬಿಜೆಪಿ ಸರ್ಕಾರ ಸುವರ್ಣಮಹೋತ್ಸವವನ್ನು ಬೇಕಂತಲೇ ಕೈಬಿಟ್ಟಿತ್ತು. ಆದರೆ ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ತಡವಾದರೂ ಕರ್ನಾಟಕದ ಸುವರ್ಣ ಮಹೋತ್ಸವವನ್ನು ಆರಂಭಿಸಿ ಇಡೀ ವರ್ಷ ಆಚರಿಸಲು ನಿರ್ಧರಿಸಿದೆವು. ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇದು ನಮ್ಮ ಬದ್ಧತೆ. ಕನ್ನಡ ಭಾಷೆ, ಸಂಸ್ಕೃತಿ, ಕಲೆಯ ಬಗ್ಗೆ ರಾಜ್ಯದ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular