ಬೆಂಗಳೂರು: ನಟಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ ವಿಡಿಯೋ, ಫೋಟೋ ಹರಿಬಿಟ್ಟವರ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ರುಕ್ಮಿಣಿ ವಂಸತ್ ದೂರು ನೀಡಿದ್ದು, ಎಐ ವಿಡಿಯೋ ಹರಿಬಿಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಡೀಪ್ ಫೇಕ್ ಮೂಲಕ ಬೇರೆಯವರ ದೇಹಕ್ಕೆ ನನ್ನ ಮುಖ ಬಳಸಿದ್ದಾರೆ. ಎಐ ಫೋಟೋ, ವಿಡಿಯೋ ಸೃಷ್ಟಿಸಿ ನನ್ನ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ನಟಿ ರುಕ್ಮಿಣಿ ವಸಂತ್ ದೂರು ನೀಡಿದ್ದರು. ಒಟ್ಟು 29 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ನೀಡಲಾಗಿದೆ. 9 ಇನ್ಸ್ಟಾಗ್ರಾಮ್ ಅಕೌಂಟ್, 14 ಎಕ್ಸ್ ಅಕೌಂಟ್, 6 ಫೇಸ್ಬುಕ್ ಅಕೌಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

