ಹಾಸನ: ಹಾಸನ ಜಿಲ್ಲೆಯಲ್ಲಿ ಮತ್ತೆ ಲಾಂಗು, ಮಚ್ಚು ಝಳಪಿಸಿದ್ದು, ಉದ್ಯಮಿ ಮಂಜೇಗೌಡನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಘಟನೆ ನಡೆದಿದೆ. ಜೋಡಿಗುಬ್ಬಿ ಗ್ರಾಮದ ಉದ್ಯಮಿ ಮಂಜೇಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೆಟ್ರೋಲ್ ಬಂಕ್ ಮತ್ತು ಟ್ರ್ಯಾಕ್ಟರ್ ಶೋರೂಂ ಮಾಲೀಕನಾಗಿರುವ ಮಂಜೇಗೌಡ ಮೇಲೆ ಟ್ಯಾಕ್ಟರ್ ಶೋರೂಂ ಬಳಿ ನಿಂತಿದ್ದಾಗ ದಾಳಿ ಮಾಡಲಾಗಿದೆ.
ದುಷ್ಕರ್ಮಿಗಳು ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡು ಹೆಲ್ಮೆಟ್ ಧರಿಸಿ ಬಂದಿದ್ದರು. ಗಂಭೀರವಾಗಿ ಗಾಯಗೊಂಡ ಮಂಜೇಗೌಡರಿಗೆ ಹೊಳೆನರಸೀಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಮೈಸೂರಿಗೆ ಕಳುಹಿಸಿದ್ದಾರೆ. ಹಳೆ ವೈಷಮ್ಯ ಹಿನ್ನೆಲೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

