HomeLatest NewsBREAKING: ನಾಲೆಗೆ ಬಿದ್ದ ಬಾಲಕನ ರಕ್ಷಿಸಲು ಹೋಗಿ ಸಹೋದರರು ನೀರು ಪಾಲು

BREAKING: ನಾಲೆಗೆ ಬಿದ್ದ ಬಾಲಕನ ರಕ್ಷಿಸಲು ಹೋಗಿ ಸಹೋದರರು ನೀರು ಪಾಲು

ಮೈಸೂರು: ಮೈಸೂರು ತಾಲೂಕಿನ ಬಡಗಲಹುಂಡಿ ಗ್ರಾಮದ ಬಳಿ ನಾಲೆಗೆ ಬಿದ್ದ ಬಾಲಕನ ರಕ್ಷಣೆಗೆ ಹೋಗಿದ್ದ ಸಹೋದರರು ನೀರು ಪಾಲಾಗಿದ್ದಾರೆ.

ನಂದನ್(25), ರಾಕೇಶ್(20) ಮೃತ ಸಹೋದರರು. ಬಗಡಗಲಹುಂಡಿ ಗ್ರಾಮದ ರಮೇಶ್ ಪುತ್ರರಾದ ನಂದನ್ ಮತ್ತು ರಾಕೇಶ್ ಅವರು ವರುಣ ನಾಲೆಯಲ್ಲಿ ನೀರಿನಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆಗೆ ಹೋದಾಗ ಘಟನೆ ನಡೆದಿದೆ.

ನಾಲೆಯಲ್ಲಿ ಕೊಂಬೆ ಹಿಡಿದುಕೊಂಡಿದ್ದ ಬಾಲಕನ ರಕ್ಷಣೆಗೆ ಇಬ್ಬರು ಧಾವಿಸಿದ್ದಾರೆ. ಬಾಲಕನ ರಕ್ಷಣೆಗಾಗಿ ಇಬ್ಬರೂ ಸಹೋದರರು ನಾಲೆಗೆ ಇಳಿದಿದ್ದಾರೆ. ಈ ವೇಳೆ ನಾಲೆಯಲ್ಲಿ ಕೊಚ್ಚಿ ಹೋಗಿ ಇಬ್ಬರು ಸಹೋದರರು ಸಾವನ್ನಪ್ಪಿದ್ದಾರೆ. ಮರದ ಕೊಂಬೆ ನೆರವಿನಿಂದ ಬಾಲಕ ಪಾರಾಗಿದ್ದಾನೆ. ವರುಣ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಂದನ್ 15 ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular