HomeKarnatakaBREAKING : ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸಂತ್ರಸ್ತೆ ಮೇಲೆಯೇ...

BREAKING : ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸಂತ್ರಸ್ತೆ ಮೇಲೆಯೇ ‘FIR’ ದಾಖಲು..!

ಬೆಂಗಳೂರು : ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಯುವತಿ ಮೇಲೆಯೇ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳ ಜಂಕ್ಷನ್ ಬಳಿ ಸರಣಿ ಅಫಘಾತ ಎಸಗಿದ್ದ ಯುವತಿ ಮೇಲೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಅತ್ಯಾಚಾರ ನಡೆಯುವುದಕ್ಕೂ ಮುನ್ನ ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಸರಣಿ ಅಪಘಾತ ಎಸಗಿದ್ದಾಳೆ ಎನ್ನಲಾಗಿದೆ. 2 ಕಾರು ಒಂದು ಬೈಕ್ ಗೆ ಡಿಕ್ಕಿ ಹೊಡೆದು ನಂತರ ಯುವತಿ ಎಸ್ಕೇಪ್ ಆಗಲು ಯತ್ನಿಸಿದ್ದಳು. ನಂತರ ವಾಹನ ಸವಾರರು ಈಕೆಯನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದರು. ನಂತರ ಸಂತ್ರಸ್ತ ಯುವತಿ ಕಾರನ್ನು ಅಲ್ಲಿಯೇ ಬಿಟ್ಟು ಬೈಕ್ ಒಂದರಲ್ಲಿ ಡ್ರಾಪ್ ಪಡೆದಿದ್ದಾಳೆ. ಡ್ರಾಪ್ ಕೊಟ್ಟ ಬೈಕ್ ಸವಾರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.

ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದೆ. ಘಟನೆ ನಡೆಯುವ ದಿನ ದಿನ ಗೆಳೆಯನ ಜೊತೆ ಕಾರಿನಲ್ಲಿ ಯುವತಿ ಪಾರ್ಟಿಗೆ ಬಂದಿದ್ದಳು. ಬಳಿಕ ಸ್ನೇಹಿತನನ್ನು ಬಿಟ್ಟು ಈಕೆ ಒಬ್ಬಳೇ ಕಾರು ಚಲಾಯಿಸಿಕೊಂಡು ಬಂದಿದ್ದಳು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಹಿನ್ನೆಲೆ

ಬೆಂಗಳೂರಿನಲ್ಲಿ ಓದುತ್ತಿರುವ ಅನ್ಯರಾಜ್ಯದ ಯುವತಿ ಆಗಸ್ಟ್ 17ರಂದು ರಾತ್ರಿ ಕೋರಮಂಗಲದಲ್ಲಿ ಪಾರ್ಟಿ ಮುಗಿಸಿ ವಾಪಸ್ ಮನೆಗೆ ಬರುವಾಗ ಅಪರಿಚಿತನ ಬೈಕ್ ನಲ್ಲಿ ಡ್ರಾಪ್ ತೆಗೆದುಕೊಂಡಿದ್ದಾಳೆ. ಮಾರ್ಗ ಮಧ್ಯೆ ಕೆಳಗಿಳಿದಿದ್ದಾಳೆ. ನಂತರ ಬೇರೆ ಬೈಕ್ ಹತ್ತಿದ್ದು ಯುವತಿ ಮದ್ಯದ ನಶೆಯಲ್ಲಿರುವುದನ್ನು ನೋಡಿದ ಆರೋಪಿ ಬೊಮ್ಮನಹಳ್ಳಿ ಸಮೀಪ ನಿರ್ಜನ ಪ್ರದೇಶದಲ್ಲಿ ಲಾರಿ ನಿಲ್ಲಿಸುವ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ಯುವತಿ ಮೊಬೈಲ್ ನಲ್ಲಿ ಎಮರ್ಜೆನ್ಸಿ ಎಸ್ಒಎಸ್ ಬಟನ್ ಒತ್ತಿದ್ದು, ತಕ್ಷಣ ಆಕೆಯ ಸ್ನೇಹಿತರಿಗೆ ಮಾಹಿತಿ ಹೋಗಿದೆ. ಅವರು ಸ್ಥಳಕ್ಕೆ ಬಂದಾಗ ಅಪರಿಚಿತ ಅಲ್ಲಿಂದ ಓಡಿ ಹೋಗಿದ್ದಾನೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular