ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಹರಿಯಾಣದ ಮಾಜಿ ಕಾಂಗ್ರೆಸ್ ಶಾಸಕಿ ಕಿರಣ್ ಚೌಧರಿ ಮತ್ತು ಅವರ ಮಗಳು ಶ್ರುತಿ ಚೌಧರಿ ಬುಧವಾರ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರಿದರು.
ಕಿರಣ್ ಚೌಧರಿ ಮತ್ತು ಶ್ರುತಿ ಚೌಧರಿ ಅವರ ಸೇರ್ಪಡೆಯ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ತರುಣ್ ಚುಗ್ ಕೂಡ ಉಪಸ್ಥಿತರಿದ್ದರು.ಕಿರಣ್ ಮತ್ತು ಶ್ರುತಿ ಮಂಗಳವಾರ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಅವರು ಕಿರಣ್ ಚೌಧರಿ ಅವರನ್ನು ಬಿಜೆಪಿಗೆ ಸ್ವಾಗತಿಸಿದರು. ಅವರ ದೇಹ ಕಾಂಗ್ರೆಸ್ನಲ್ಲಿದೆ, ಆದರೆ ಅವರ ಮನಸ್ಸು ಬಿಜೆಪಿಯಲ್ಲಿದೆ ಎಂದು ಅವರು ಹೇಳಿದ್ದಾರೆ. ಕಿರಣ್ ಚೌಧರಿ ಮತ್ತು ಶ್ರುತಿ ಅವರಿಗೆ ಪಕ್ಷದಿಂದ ಸಂಪೂರ್ಣ ಗೌರವ ಸಿಗಲಿದೆ.
नई शुरुआत
एक नया प्रभातआज सबका साथ, सबका विकास व सबका विश्वास और एक भारत, श्रेष्ठ भारत की संकल्पना हेतु उन्नत क्षेत्र व प्रदेश के उद्देश्य से अपने कार्यकर्ताओं के साथ भारतीय जनता पार्टी की सदस्यता ग्रहण की।
हमारा वचन है कि चौ.बंसीलाल जी के पदचिन्हों का अनुसरण करते हुए हरियाणा… pic.twitter.com/jLoiu9FLEZ
— Kiran Choudhry (@officekiran) June 19, 2024

