ಶಿವಮೊಗ್ಗ: 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ಭದ್ರಾವತಿ ಬಿಇಒ ಸೇರಿದಂತೆ ಇಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಲಿಂಗರಾಜು ಅವರು ಈ ಕುರಿತಾಗಿ ದೂರು ನೀಡಿದ್ದ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಭದ್ರಾವತಿ ತಾಲ್ಲೂಕು ಬಿ.ಇ.ಓ ಕಛೇರಿಯಲ್ಲಿ ಕಛೇರಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗರಾಜು, ಅವರಿಗೆ 2011 ನೇ ಸಾಲಿನಿಂದ 2023ನೇ ಸಾಲಿನ ಅವಧಿಯಲ್ಲಿ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಮತ್ತು ಇತರೆ ಭತ್ಯೆಗಳು ಸೇರಿ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಹಲವು ಬಾರಿ ಭದ್ರಾವತಿ ತಾಲ್ಲೂಕ್ ಬಿ.ಇ.ಒ, ಅವರಿಗೆ ಶಿಮೊಗ್ಗ ಡಿ.ಡಿ.ಪಿ.ಐ ರವರಿಗೆ ಹಾಗೂ ಮೇಲಾಧಿಕರಿಗಳಿಗೆ ಮನವಿ ಸಲ್ಲಿಸಿರುತ್ತಾರೆ.
ಭದ್ರಾವತಿ ತಾಲ್ಲೂಕ್ ಕ್ಷೇತ್ರ ಶಿಕ್ಷಣಾಧಿಕಾರಿಯಾದ(ಬಿ.ಇ.ಒ,) ನಾಗೇಂದ್ರಪ್ಪ.ಎ.ಕೆ ಮತ್ತು ಅವರ ಮಧ್ಯವರ್ತಿ(ಖಾಸಗಿ ವ್ಯಕ್ತಿ) ಮಂಜುನಾಥ ಇವರಿಬ್ಬರು ಸೇರಿಕೊಂಡು ಬಿ.ಇ.ಒ. ಕಛೇರಿಯಲ್ಲಿ ಪಿರ್ಯಾದಿದಾರರಿಗೆ ಅವರಿಗೆ ಬರಬೇಕಾದ ವಾರ್ಷಿಕ ಬಡ್ತಿ ಮತ್ತು ಇತರೆ ಭತ್ಯೆಗಳನ್ನು ಮಾಡಿಕೊಡಲು ಪಿರ್ಯಾದಿ ಬಳಿ 4 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಈ ಬಗ್ಗೆ ಪಿರಾದುದಾರರು ದಿನಾಂಕ:2-3-2026 ರಂದು ನೀಡಿದ ದೂರಿನ ಮೇರೆಗೆ ಕಲಂ:7(೩) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988. (ತಿದ್ದುಪಡಿ ಕಾಯಿದೆ-2018) ರೀತ್ಯಾ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ:-02-03-2026 ರಂದು ಸಂಜೆ 7 ಗಂಟೆಗೆ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಬಿ.ಇ.ಓ ರವರ ಕೊಠಡಿಯಲ್ಲಿ, ಬಿ.ಇ.ಒ. ನಾಗೇಂದ್ರದಪ್ಪ.ಎ.ಕೆ ಮತ್ತು ಮಧ್ಯವರ್ತಿ(ಖಾಸಗಿ ವ್ಯಕ್ತಿ) ಮಂಜುನಾಥ ಅವರು ಪಿರಾದಿಯಿಂದ 1,00,000 ರೂ. ಲಂಚದ ಹಣವನ್ನು ಪಡೆದುಕೊಂಡ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ ಮತ್ತು ಲಂಚದ ಹಣವನ್ನು ಜಪ್ತಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಅಧಿಕಾರಿ ನಾಗೇಂದ್ರದಪ್ಪ ಎ..ಕೆ ಮತ್ತು ಅವರ ಮಧ್ಯವರ್ತಿ(ಖಾಸಗಿ ವ್ಯಕ್ತಿ) ಮಂಜುನಾಥ್ ಅವರುಗಳನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ರವರು ಕೈಗೊಂಡಿರುತ್ತಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ, ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರು ಬಿ.ಪಿ. ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಗುರುರಾಜ್ ಎನ್. ಮೈಲಾರ, ಸಿಬ್ಬಂದಿಯವರಾದ ಯೋಗೇಶ್.ಜಿ.ಸಿ., ಮಂಜುನಾಥ ಎಂ., ಟೀಕಪ್ಪ, ಸುರೇಂದ್ರ ಹೆಚ್.ಜಿ., ಪ್ರಶಾಂತ್ ಕುಮಾರ್ ಹೆಚ್., ಚನ್ನೇಶ, ಅರುಣ್ ಕುಮಾರ್, ದೇವರಾಜ್ ವಿ., ಪ್ರಕಾಶ್ ಬಾರಿಮರದ, ಆದರ್ಶ್, ಚಂದ್ರಿಬಾಯಿ, ಪ್ರದೀಪ, ಚೇತನ್, ತರುಣ್ ಕುಮಾರ್, ಆಂಜನೇಯ, ಆನಂದ, ಗೋಪಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

