
ಬ್ಯಾನರ್, ಬಂಟಿಂಗ್ಸ್ ಹಾಗೂ ಇತರೆ ಶುಭಾಶಯ ಫಲಕಗಳನ್ನು ಅಳವಡಿಕೆ ಮಾಡಿದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಕಂಬಳ ಆಯೋಜಕರಿಗೆ ಬರೋಬ್ಬರಿ 50 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ. ಹಾಗೂ ಎಲ್ಲಾ ಜಾಹೀರಾತು ಫಲಕಗಳನ್ನು ತೆಗೆದು ಹಾಕಲಾಗಿದೆ.
ಜಾಹೀರಾತು ನಿಯಮ ಉಲ್ಲಂಘಿಸಿದ ಹಿನ್ನೆಲೆ ದಂಡ ವಿಧಿಸಿ ಬಿಬಿಎಂಪಿ ಕ್ರಮ ಕೈಗೊಂಡಿದೆ. ಕಂಬಳ ಆಯೋಜನೆ ಮಾಡಿರುವುದಕ್ಕೆ ಶುಭಾಶಯ ಕೋರಿ ವಿವಿಧ ನಾಯಕರು ಬ್ಯಾನರ್ ಹಾಗೂ ಬಂಟಿಂಗ್ಸ್ಗಳನ್ನು ಅಳವಡಿಕೆ ಮಾಡಿದ್ದರು. ಈ ಕುರಿತು ಕಂಬಳ ಆಯೋಜಕರ ವಿರುದ್ಧ ಸದಾಶಿವ ನಗರ ಠಾಣೆಗೆ ದೂರು ನೀಡಲಾಗಿತ್ತು.
ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗಿದ್ದು, ಬೆಂಗಳೂರು ಮಾತ್ರವಲ್ಲದೇ ಕರಾವಳಿ ಭಾಗದ ಸಾಕಷ್ಟು ಮಂದಿ ಅಭಿಮಾನಿಗಳು ಆಗಮಿಸಿ ಕಂಬಳ ವೀಕ್ಷಿಸಿದ್ದಾರೆ.

