ಹೊಸಪೇಟೆ(ವಿಜಯನಗರ): ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬೆಂಗಳೂರಿನ ಪಬ್ ವೊಂದರ ಬಾಲ್ಕನಿಯಲ್ಲಿ ನಿಂತು ಆಸಭ್ಯವಾಗಿ ಕೈ ಬೆರಳು ತೋರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಝೈದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಆರ್ಯನ್ ಖಾನ್ ಬೆಂಗಳೂರಿನಲ್ಲಿ ಅಸಭ್ಯವಾಗಿ ಕೈ ಬೆರಳು ತೋರಿಸಿದ್ದು ಸ್ನೇಹಿತನಿಗೆ ಹೊರತೂ ಜನರಿಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಕಲ್ಟ್’ ಚಿತ್ರದ ಪ್ರಚಾರಕ್ಕಾಗಿ ಹೊಸಪೇಟೆಗೆ ಆಗಮಿಸಿದ್ದ ಝೈದ್ ಖಾನ್ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಗೆ ಹಾಗೆ ಕೈ ಬೆರಳು ತೋರಿಸಿದರೆ ಖಂಡಿತ ಆರ್ಯನ್ ಖಾನ್ ಕೂಡ ಸುಮ್ಮನಿರುವುದಿಲ್ಲ. ಜನಜಂಗುಳಿ ನಿವಾರಿಸಲು ಕಳುಹಿಸಿದ್ದ ಸ್ನೇಹಿತ ಇನ್ನೂ ಬಂದಿರಲಿಲ್ಲ. ಬಾಲ್ಕನಿಯಲ್ಲಿ ನಿಂತ ವೇಳೆ ಆತನನ್ನು ಕಂಡಾಗ ಆರ್ಯನ್ ಖಾನ್ ಕೈ ಬೆರಳು ತೋರಿಸಿದ್ದಾರೆ ಎಂದು ಹೇಳಿದ್ದಾರೆ.

