ಬೆಂಗಳೂರು: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಮನೆಯ ಬಳಿಗೆ ಆಟೋ ನಿಲ್ಲಿಸುವ ವಿಚಾರಕ್ಕೆ ಮೂವರ ನಡುವೆ ಗಲಾಟೆಯಾಗಿದೆ. ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ನಾಯಂಡಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಗುಣ ಮತ್ತು ವೇಲು ಇಬ್ಬರಿಗೂ ಚಾಕುವಿನಿಂದ ಇರಿದು ಆರೋಪಿ ವಿನೋದ್ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗುಣ ಸಾವನ್ನಪ್ಪಿದ್ದು, ಗಾಯಾಳು ವೇಲು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಘಟನೆ ನಡೆದಿದೆ. ಮೃತಪಟ್ಟ ಗುಣ, ಆರೋಪಿ ವಿನೋದ್ ಮತ್ತು ಗಾಯಾಳು ವೇಲು ಮೂವರು ಸ್ನೇಹಿತರಾಗಿದ್ದರು.
ಮೂವರು ಕೊಲೆ ಪ್ರಕರಣವೊಂದರ ಆರೋಪಿಗಳಾಗಿದ್ದಾರೆ. ಮನೆಯ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಗಲಾಟೆಯಾಗಿದೆ. ಎರಡು ದಿನಗಳ ಹಿಂದೆ ಮೂವರ ನಡುವೆ ಗಲಾಟೆ ಆಗಿತ್ತು. ನಿನ್ನೆ ಬೈಕ್ ನಲ್ಲಿ ಬರುತ್ತಿದ್ದ ವೇಳೆಯಲ್ಲಿ ವೇಲು ಮತ್ತು ಗುಣ ಅವರನ್ನು ಅಡ್ಡಗಟ್ಟಿದ ವಿನೋದ್ ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಕುತ್ತಿಗೆ ಭಾಗಕ್ಕೆ ಚಾಕುನಿಂದ ಇರಿದ ಪರಿಣಾಮ ಗುಣ ಸಾವನ್ನಪ್ಪಿದ್ದಾನೆ. ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದಿದ್ದರಿಂದ ವೇಲು ಬದುಕುಳಿದಿದ್ದಾನೆ.

