ಮೈಸೂರು: ಹಣದ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರು ಜಿಲ್ಲೆ ಹುಣಸೂರು ನಗರದಲ್ಲಿ ಘಟನೆ ನಡೆದಿದೆ.
ನಗರದ ನಿಜಾಂ ಮೊಹಲ್ಲಾ ನಿವಾಸಿ ಖಾಜಾಪೀರ್(44) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಖಾಜಾಪೀರ್ ನನ್ನು ಮುಸ್ಲಿಂ ಬ್ಲಾಕ್ ನ ಜಾವೀದ್ ಮತ್ತು ಇನಾಯತ್ ಉಲ್ಲಾ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಆಟೋ ಚಾಲಕ ಹಾಗೂ ಲೋಡರ್ ಆಗಿ ಖಾಜಾಪೀರ್ ಕೆಲಸ ಮಾಡುತ್ತಿದ್ದ. ಕೊಲೆ ಆರೋಪಿ ಜಾವೀದ್ ವ್ಯಕ್ತಿಯೊಬ್ಬರಿಂದ 15 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ. ಸಾಲ ವಾಪಸ್ ನೀಡದಿದ್ದಕ್ಕೆ ಜಾವೀದ್ ನ ಬೈಕ್ ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಸ್ನೇಹಿತ ಖಾಜಾಪೀರ್ ಕಾರಣ ಎಂದು ಜಾವೀದ್ ಗಲಾಟೆ ಮಾಡಿದ್ದಾನೆ. ಮರದ ರಿಪೀಸ್ ನಿಂದ ಹಲ್ಲೆ ನಡೆಸಿ ಖಾಜಾಪೀರ್ ನನ್ನು ಕೊಲೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಜಾವೀದ್ ಮತ್ತು ಇನಾಯತ್ ಉಲ್ಲಾ ಅವರನ್ನು ಬಂಧಿಸಲಾಗಿದೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

