HomeKarnatakaBREAKING : ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ : 2 ವರ್ಷಗಳ ಹಿಂದಿನ ಕೇಸ್...

BREAKING : ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ : 2 ವರ್ಷಗಳ ಹಿಂದಿನ ಕೇಸ್ ರೀ ಓಪನ್ ?

ಬೆಂಗಳೂರು : ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, 2 ವರ್ಷಗಳ ಹಿಂದಿನ ಕೇಸ್ ರೀ ಓಪನ್ ಆಗಲಿದೆ.

ಹೌದು, ನಿರ್ಮಾಪಕ ಭರತ್ ಗೆ ಬೆದರಿಕೆ ಹಾಕಿದ ಪ್ರಕರಣ ಇದೀಗ ರೀ ಓಪನ್ ಆಗುವ ಸಾಧ್ಯತೆಯಿದೆ. 2 ವರ್ಷದ ಹಿಂದೆ ಕೆಂಗೇರಿ ಠಾಣೆಯಲ್ಲಿ ಪ್ರೊಡ್ಯೂಸರ್ ಭರತ್ ಗೆ ಬೆದರಿಕೆ ಹಾಕಿದ್ದ ಕೇಸ್ ದಾಖಲಾಗಿತ್ತು.

ಭಗವಾನ್ ಶ್ರೀಕೃಷ್ಣ ಸಿನಿಮಾವನ್ನು ಭರತ್ ನಿರ್ಮಾಣ ಮಾಡಿದ್ದರು. ದೃವನ್ ನಾಯಕನಾಗಿ ನಟಿಸಿದ್ದರು. 2020 ರಲ್ಲಿ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಿತ್ತು. ಕೋವಿಡ್ ಕಾರಣದಿಂದಾಗಿ ಅರ್ಧಕ್ಕೆ ಸಿನಿಮಾ ನಿಂತು ಹೋಗಿತ್ತು. ಈ ವಿಚಾರವನ್ನು ಧೃವನ್ ನಟ ದರ್ಶನ್ ಬಳಿ ಹೋಗಿ ಹೇಳಿದ್ದರಂತೆ. ನಂತರ ನಟ ದರ್ಶನ್ ಭರತ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದರಂತೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿನಿಮಾ ಶುರು ಮಾಡು ಇಲ್ಲಂದ್ರೆ ಈ ಭೂಮಿ ಮೇಲೆ ನೀರು ಇರೋದಿಲ್ಲ ಎಂದು ದರ್ಶನ್ ಅವಾಜ್ ಹಾಕಿದ್ದರಂತೆ. ಈ ಸಂಬಂಧ ಕೆಂಗೇರಿ ಠಾಣೆಗೆ ನಿರ್ಮಾಪಕ ಭರತ್ ದೂರು ನೀಡಿದ್ರು,..ಆದರೆ ಪೊಲೀಸರು ದೃವನ್, ದರ್ಶನ್ ವಿರುದ್ದ ಕ್ರಮಕೈಗೊಂಡಿರಲಿಲ್ಲ ಎನ್ನಲಾಗಿದೆ. ಇದೀಗ ನಿರ್ಮಾಪಕ ಭರತ್ ಬೆದರಿಕೆ ಪ್ರಕರಣವನ್ನು ರೀ ಓಪನ್ ಮಾಡಲು ನಿರ್ಧರಿಸಿದ್ದು, ಕಮಿಷನರ್ ಗೆ ದೂರು ಕೂಡಲು ಕೂಡ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular