BREAKING : ಉತ್ತರಕಾಶಿ ಸುರಂಗದಲ್ಲಿರುವ ಎಲ್ಲಾ 41 ಕಾರ್ಮಿಕರು ಸೇಫ್ : ಕೆಲವೇ ಕ್ಷಣದಲ್ಲಿ ಹೊರಕ್ಕೆ

ಉತ್ತರಕಾಶಿ ಸುರಂಗದಲ್ಲಿರುವ ಎಲ್ಲಾ 41 ಕಾರ್ಮಿಕರು ಸೇಫ್ ಆಗಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದ್ದು, ಕೆಲವೇ ಕ್ಷಣದಲ್ಲಿ 41 ಕಾರ್ಮಿಕರನ್ನು ರಕ್ಷಣಾ ಸಿಬ್ಬಂದಿ ಹೊರಕ್ಕೆ ಕರೆ ತರಲಾಗುತ್ತದೆ.

ಸುರಂಗದಲ್ಲಿ ಸಿಲುಕಿದ ಎಲ್ಲ 41 ಕಾರ್ಮಿಕರೂ ಸುರಕ್ಷಿತರಾಗಿದ್ದಾರೆ ಎಂದು ಎನ್ಡಿಆರ್ಎಫ್ ಮೂಲಗಳು ತಿಳಿಸಿವೆ. ಎನ್ಡಿಆರ್ಎಫ್ ಸಿಬ್ಬಂದಿಯು ಕಾರ್ಮಿಕರ ಜತೆ ಸಂಪರ್ಕ ಸಾಧಿಸಿದ್ದು, ಕೆಲವೇ ಕ್ಷಣಗಳಲ್ಲಿ ಎಲ್ಲರನ್ನೂ ಹೊರಗೆ ಕರೆತರಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಸುರಂಗದ ಹೊರಗೆ ಆಂಬುಲೆನ್ಸ್ಗಳು ವೈದ್ಯರು ಬೀಡು ಬಿಟ್ಟಿದ್ದು. ಐಸಿಯು ಬೆಡ್ ಗಳು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲೂ ಸಕಲ ಸಿದ್ದತೆ ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಹೆಲಿಕಾಪ್ಟರ್ ಮೂಲಕ ಬೇರೆ ಬೇರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೂ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read