ಬೆಂಗಳೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರ ತಲೆಗೆ ಬಿಯರ್ ಬಾಟಲ್ ನಿಂದ ಹೊಡೆದ ಘಟನೆ ಬೆಂಗಳೂರಿನ ಆನೇಕಲ್ ನ ಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ.
ಪ್ರಕಾಶ್ ಹಲ್ಲೆಗೊಳಗಾದವರು. ಕುಡಿಯಲು ಬಾರ್ ಗೆ ಬಂದಿದ್ದ ಪ್ರಕಾಶ್ ಮೇಲೆ ಮತ್ತೊಂದು ಟೇಬಲ್ ನಲ್ಲಿದ್ದ ಮೂವರು ಏಕಾಏಕಿ ದಾಳಿ ನಡೆಸಿದ್ದಾರೆ. ಬಾಟಲ್ ನಿಂದ ಪ್ರಕಾಶ್ ಅವರ ತಲೆಗೆ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕಾಶ್ ತಲೆಗೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಗಾಯಗೊಂಡ ಪ್ರಕಾಶ್ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

